2 Samuel 20:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೋವಾಬನು ಆ ಸ್ತ್ರೀಯೊಂದಿಗೆ ಮಾತಾಡಲು ಹತ್ತಿರಕ್ಕೆ ಬಂದನು. ಅವಳು, “ನೀನು ಯೋವಾಬನೇ?” ಎಂದು ಕೇಳಿದಳು. “ಹೌದು, ನಾನೇ ಯೋವಾಬನು” ಎಂದು ಅವನು ಉತ್ತರಿಸಿದನು. ಆಗ ಅವಳು ಯೋವಾಬಿಗೆ, “ನಾನು ಹೇಳುವುದನ್ನು ಕೇಳು” ಎಂದಳು. “ಆಗಲಿ, ಕೇಳುತ್ತೇನೆ” ಎಂದು ಯೋವಾಬನು ಉತ್ತರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೋವಾಬನು ಬರಲು ಆ ಸ್ತ್ರೀಯು, “ನೀನು ಯೋವಾಬನೋ?” ಎಂದು ಅವನನ್ನು ಕೇಳಲು ಅವನು “ಹೌದು ನಾನೇ” ಎಂದು ಉತ್ತರ ಕೊಟ್ಟನು. ಆಕೆಯು, “ನಿನ್ನ ದಾಸಿಯ ಮಾತನ್ನು ಕೇಳು” ಅನ್ನಲು ಅವನು, “ಕೇಳುತ್ತೇನೆ” ಎಂದನು.
Kannada BSI Bible 2016
ಅವನು ಸವಿಾಪ ಬಂದಾಗ ಆ ಸ್ತ್ರೀಯು--ನೀನು ಯೋವಾಬನೋ ಅಂದಳು. ಅವನು--ನಾನೇ ಅಂದನು. ಅವಳು ಅವನಿಗೆ--ನಿನ್ನ ಸೇವಕಳ ಮಾತು ಗಳನ್ನು ಕೇಳು ಅಂದಳು. ಅವನು--ನಾನು ಕೇಳುತ್ತೇನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೋವಾಬನು ಬರಲು ಆ ಸ್ತ್ರೀಯು - ನೀನು ಯೋವಾಬನೋ ಎಂದು ಅವನನ್ನು ಕೇಳಿದಳು. ಅವನು - ಹೌದು, ನಾನೇ ಎಂದು ಉತ್ತರಕೊಟ್ಟನು. ಆಕೆಯು - ನಿನ್ನ ದಾಸಿಯ ಮಾತನ್ನು ಕೇಳು ಅನ್ನಲು ಅವನು - ಕೇಳುತ್ತೇನೆ ಅಂದನು.
Kannada Bible (KNCL) BSI 2016
“ನೀವು ಯೋವಾಬೋ?’ ಎಂದು ಅವನನ್ನು ಕೇಳಿದಳು. ಅವನು, “ಹೌದು, ನಾನೇ,” ಎಂದು ಉತ್ತರಕೊಟ್ಟನು. ಆಕೆ, “ನಿಮ್ಮ ದಾಸಿಯ ಮಾತನ್ನು ಕೇಳಿ,” ಎನ್ನಲು ಅವನು, “ಕೇಳುತ್ತೇನೆ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಅವಳ ಬಳಿಗೆ ಸಮೀಪಿಸಿ ಬಂದಾಗ, ಆ ಸ್ತ್ರೀಯು, “ನೀನು ಯೋವಾಬನೋ?” ಎಂದಳು. ಅದಕ್ಕೆ ಅವನು, “ಹೌದು, ನಾನೇ,” ಎಂದು ಉತ್ತರಕೊಟ್ಟನು. ಆಕೆ, “ನಿನ್ನ ದಾಸಿಯ ಮಾತನ್ನು ಕೇಳಿ,” ಎಂದಳು. ಅದಕ್ಕೆ ಅವನು, “ನಾನು ಕೇಳುತ್ತೇನೆ,” ಎಂದನು.