2 Samuel 20:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದ್ದರಿಂದ ಯೋವಾಬನು ಕೆರೇತ್ಯರ ಪೆಲೇತ್ಯರ ಮತ್ತು ಸೈನಿಕರೆಲ್ಲರ ಸಮೇತವಾಗಿ ಜೆರುಸಲೇಮಿನಿಂದ ಹೊರಟು ಬಿಕ್ರೀಯ ಮಗನಾದ ಶೆಬನನ್ನು ಅಟ್ಟಿಸಿಕೊಂಡು ಹೋದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಅವನು ಯೋವಾಬನ ಸೈನಿಕರನ್ನೂ, ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲು ದಂಡುಗಳನ್ನೂ ಎಲ್ಲಾ ಶೂರರನ್ನೂ ಕರೆದುಕೊಂಡು ಬಿಕ್ರೀಯ ಮಗನಾದ ಶೆಬನನ್ನು ಬೆನ್ನಟ್ಟುವುದಕ್ಕೋಸ್ಕರ ಯೆರೂಸಲೇಮಿನಿಂದ ಹೊರಟರು.
Kannada BSI Bible 2016
ಹಾಗೆಯೇ ಅವನ ಹಿಂದೆ ಯೋವಾಬನ ಜನರೂ ಕೆರೇತ್ಯರೂ ಪೆಲೇ ತ್ಯರೂ ಎಲ್ಲಾ ಪರಾಕ್ರಮಶಾಲಿಗಳೂ ಬಿಕ್ರಿಯ ಮಗ ನಾದ ಶೆಬನನ್ನು ಹಿಂದಟ್ಟಲು ಯೆರೂಸಲೇಮಿನಿಂದ ಹೊರಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಅವನು ಯೋವಾಬನ ಸೈನಿಕರನ್ನೂ ಕೆರೇತ್ಯ, ಪೆಲೇತ್ಯ ಎಂಬ ಕಾವಲುದಂಡುಗಳನ್ನೂ ಎಲ್ಲಾ ಶೂರರನ್ನೂ ಕರಕೊಂಡು ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟುವದಕ್ಕೋಸ್ಕರ ಯೆರೂಸಲೇವಿುನಿಂದ ಹೊರಟನು.
Kannada Bible (KNCL) BSI 2016
ಆಗ ಅವನು ಯೋವಾಬನ ಸೈನಿಕರನ್ನೂ, ‘ಕೆರೇತ್ಯ’ ಹಾಗು ‘ಪೆಲೇತ್ಯ’ ಎಂಬ ಕಾವಲುದಂಡುಗಳನ್ನೂ ಎಲ್ಲಾ ಶೂರರನ್ನೂ ಕರೆದುಕೊಂಡು ಬಿಕ್ರೀಯ ಮಗನಾದ ಶೆಬನನ್ನು ಬೆನ್ನಟ್ಟುವುದಕ್ಕಾಗಿ ಜೆರುಸಲೇಮಿನಿಂದ ಹೊರಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗೆಯೇ ಅವನ ಹಿಂದೆ ಯೋವಾಬನ ಜನರೂ, ಕೆರೇತ್ಯರೂ, ಪೆಲೇತ್ಯರೂ, ಸಮಸ್ತ ಪರಾಕ್ರಮಶಾಲಿಗಳೂ ಅಬೀಷೈಯನ ನೇತೃತ್ವದಲ್ಲಿ ಬಿಕ್ರಿಯ ಮಗ ಶೆಬನನ್ನು ಹಿಂದಟ್ಟಲು ಯೆರೂಸಲೇಮಿನಿಂದ ಹೊರಟರು.