2 Samuel 22:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನೇ, ನೀನು ಗದರಿಸಿದಾಗ ನಿನ್ನ ಬಾಯಿಂದ ಪ್ರಬಲವಾದ ಗಾಳಿಯು ಬೀಸಿತು; ನೀರು ಹಿಂದಕ್ಕೆ ತಳ್ಳಲ್ಪಟ್ಟಿತು. ಸಮುದ್ರದ ತಳವೂ ಭೂಮಿಯ ಅಸ್ತಿವಾರಗಳು ಕಣ್ಣಿಗೆ ಗೋಚರವಾದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಯೆಹೋವನ ಗದರಿಕೆಯಿಂದಲೂ ಆತನ ಶ್ವಾಸಭರದಿಂದಲೂ ಸಮುದ್ರದ ತಳವು ಕಾಣಿಸಿತು. ಭೂಮಂಡಲದ ಅಸ್ಥಿವಾರವು ತೋರಿಬಂದವು.
Kannada BSI Bible 2016
ಮಿಂಚನ್ನು ಕಳುಹಿಸಿ ಅವರನ್ನು ಗಲಿಬಿಲಿ ಮಾಡಿ ದನು. ಆಗ ಕರ್ತನ ಗದರಿಕೆಯಿಂದಲೂ ಆತನ ಮೂಗಿನ ಶ್ವಾಸದ ಗಾಳಿಯಿಂದಲೂ ಸಮುದ್ರದ ನೆಲೆ ಗಳು ಕಾಣಲ್ಪಟ್ಟವು; ಭೂಲೋಕದ ಅಸ್ತಿವಾರಗಳು ಬೈಲಾದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಯೆಹೋವನ ಗದರಿಕೆಯಿಂದಲೂ ಆತನ ಶ್ವಾಸಭರದಿಂದಲೂ ಸಮುದ್ರದ ತಳವು ಕಾಣಿಸಿತು, ಭೂಮಂಡಲದ ಅಸ್ತಿವಾರಗಳು ತೋರಬಂದವು.
Kannada Bible (KNCL) BSI 2016
ಆತನಾ ಗದರಿಕೆಗೆ, ಆತನಾ ಶ್ವಾಸಭರಕ್ಕೆ ಕಾಣಿಸಿಕೊಂಡಿತು ಇಂಗಿಹೋದ ಸಮುದ್ರದ ತಳ ತೋರಿಬಂದಿತು ಭೂಲೋಕದ ಅಸ್ತಿವಾರ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೆಹೋವ ದೇವರ ಗದರಿಕೆಯಿಂದಲೂ, ಅವರ ಮೂಗಿನ ಶ್ವಾಸದ ಗಾಳಿಯಿಂದಲೂ ಸಮುದ್ರದ ತಳವು ಕಾಣಿಸಿತು. ಭೂಲೋಕದ ಅಸ್ತಿವಾರಗಳು ಬಯಲಾದವು.