2 Samuel 22:43 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ನನ್ನ ಶತ್ರುಗಳನ್ನು ತುಂಡುತುಂಡಾಗಿ ಕತ್ತರಿಸಿಹಾಕಿದೆ. ಅವರು ನೆಲದ ಮೇಲಿನ ಧೂಳಿನಂತಾದರು. ನನ್ನ ಶತ್ರುಗಳನ್ನು ರಸ್ತೆಯಲ್ಲಿನ ಮಣ್ಣಿನಂತಾಗುವವರೆಗೆ ತುಳಿದುಬಿಟ್ಟೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಭೂಮಿಯ ಧೂಳನ್ನೋ ಎಂಬಂತೆ ಅವರನ್ನು ಪುಡಿಪುಡಿ ಮಾಡಿದೆನು. ಬೀದಿಯಲ್ಲಿರುವ ಕೆಸರನ್ನೋ ಎಂಬಂತೆ ಅವರನ್ನು ತುಳಿದು ಎಸೆದುಬಿಟ್ಟೆನು.
Kannada BSI Bible 2016
ಆಗ ನಾನು ಅವರನ್ನು ನೆಲದ ಧೂಳಿನ ಹಾಗೆ ಪುಡಿಪುಡಿಮಾಡಿದೆನು; ಬೀದಿಯ ಕೆಸರಿನ ಹಾಗೆ ಅವರನ್ನು ತುಳಿದು ಚದರುವಂತೆ ಮಾಡಿದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಭೂವಿುಯ ಧೂಳನ್ನೋ ಎಂಬಂತೆ ಅವರನ್ನು ಪುಡಿಪುಡಿಮಾಡಿದೆನು; ಬೀದಿಯಲ್ಲಿರುವ ಕೆಸರನ್ನೋ ಎಂಬಂತೆ ಅವರನ್ನು ತುಳಿದು ಎಸೆದುಬಿಟ್ಟೆನು.
Kannada Bible (KNCL) BSI 2016
ಪುಡಿಪುಡಿ ಮಾಡಿದೆ ನಾನವರನು ಮಣ್ಣಿನ ಹೆಂಟೆಯಂತೆ ಎತ್ತೆಸೆದುಬಿಟ್ಟೆ ನಾನವರನು ಮೋರಿಯ ಕೆಸರಿನಂತೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಅವರನ್ನು ನೆಲದ ಧೂಳಿನಂತೆ ಪುಡಿಪುಡಿ ಮಾಡಿದೆನು; ಬೀದಿಯಲ್ಲಿನ ಕೆಸರು ಎಂಬಂತೆ ತುಳಿದು ಎಸೆದುಬಿಟ್ಟೆನು.