2 Samuel 22:50 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನೇ, ಈ ಕಾರಣದಿಂದಲೇ ನಾನು ಅನ್ಯ ಜನಾಂಗಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು. ಈ ಕಾರಣದಿಂದಲೇ ನಿನ್ನ ಹೆಸರಿನ ಮೇಲೆ ಹಾಡುಗಳನ್ನು ಹಾಡುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಕಾರಣದಿಂದ ಯೆಹೋವನೇ, ಅನ್ಯಜನಾಂಗಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು. ನಿನ್ನ ನಾಮವನ್ನು ಸಂಕೀರ್ತಿಸುವೆನು.
Kannada BSI Bible 2016
ಆದದರಿಂದ ಓ ಕರ್ತನೇ, ನಾನು ಜನಾಂಗ ಗಳಲ್ಲಿ ನಿನ್ನನ್ನು ಕೊಂಡಾಡುವೆನು; ನಿನ್ನ ಹೆಸರನ್ನು ಕೀರ್ತಿಸುವೆನು.ಆತನು ತನ್ನ ಅರಸನಿಗೆ ರಕ್ಷಣೆಯ ಗೋಪುರವಾಗಿದ್ದಾನೆ; ತನ್ನ ಅಭಿಷಕ್ತನಾದ ದಾವೀದ ನಿಗೂ ಅವನ ಸಂತತಿಗೂ ಕೃಪೆಯನ್ನು ಯುಗಯುಗಕ್ಕೂ ಅನುಗ್ರಹಿಸುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಕಾರಣದಿಂದ ಯೆಹೋವನೇ, ಅನ್ಯಜನಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು; ನಿನ್ನ ನಾಮವನ್ನು ಸಂಕೀರ್ತಿಸುವೆನು;
Kannada Bible (KNCL) BSI 2016
ಎಂತಲೆ, ನಿನ್ನ ಸ್ತುತಿಪೆನು ಅನ್ಯಜನಗಳ ಮಧ್ಯೆ ನಿನ್ನ ನಾಮವನು ಹೇ ಸರ್ವೇಶ್ವರಾ ಸಂಕೀರ್ತಿಪೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಯೆಹೋವ ದೇವರೇ, ನಾನು ಜನಾಂಗಗಳಲ್ಲಿ ನಿಮ್ಮನ್ನು ಕೊಂಡಾಡುವೆನು. ನಿಮ್ಮನ್ನು ಕೊಂಡಾಡಿ ನಿಮ್ಮ ಹೆಸರನ್ನು ಕೀರ್ತಿಸುವೆನು.