2 Samuel 22:51 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆತನು ತಾನು ನೇಮಿಸಿದ ರಾಜನಿಗೆ ಸಹಾಯಮಾಡಿ ಯುದ್ಧಗಳಲ್ಲಿ ಜಯ ದಯಪಾಲಿಸುವನು. ಆತನು ನನ್ನ ರಕ್ಷಣಾದುರ್ಗವಾಗಿದ್ದಾನೆ. ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಪ್ರೀತಿಯನ್ನು ಮತ್ತು ದಯೆಯನ್ನು ತೋರುವನು. ದಾವೀದನಿಗೆ ಮತ್ತು ಅವನ ಸಂತತಿಯವರಿಗೆ ಆತನು ಎಂದೆಂದಿಗೂ ಕೃಪೆ ತೋರಿಸುವವನಾಗಿದ್ದಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆತನು ತಾನು ನೇಮಿಸಿದ ಅರಸನಿಗೋಸ್ಕರ ವಿಶೇಷ ರಕ್ಷಣೆಯನ್ನು ದಯಪಾಲಿಸುವವನಾಗಿದ್ದಾನೆ. ತಾನು ಅಭಿಷೇಕಿಸಿದ ದಾವೀದನಿಗೂ, ಅವನ ಸಂತತಿಯವರೆಗೆ ಸದಾಕಾಲವೂ ಕೃಪೆಯನ್ನು ಅನುಗ್ರಹಿಸುವವನಾಗಿದ್ದಾನೆ.
Kannada BSI Bible 2016
ಆತನು ತನ್ನ ಅರಸನಿಗೆ ರಕ್ಷಣೆಯ ಗೋಪುರವಾಗಿದ್ದಾನೆ; ತನ್ನ ಅಭಿಷಕ್ತನಾದ ದಾವೀದ ನಿಗೂ ಅವನ ಸಂತತಿಗೂ ಕೃಪೆಯನ್ನು ಯುಗಯುಗಕ್ಕೂ ಅನುಗ್ರಹಿಸುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನು ತಾನು ನೇವಿುಸಿದ ಅರಸನಿಗೋಸ್ಕರ ವಿಶೇಷರಕ್ಷಣೆಯನ್ನು ದಯಪಾಲಿಸುವವನಾಗಿದ್ದಾನೆ; ತಾನು ಅಭಿಷೇಕಿಸಿದ ದಾವೀದನಿಗೂ ಅವನ ಸಂತತಿಯವರಿಗೂ ಸದಾಕಾಲ ಕೃಪೆಯನ್ನು ಅನುಗ್ರಹಿಸುವವನಾಗಿದ್ದಾನೆ.
Kannada Bible (KNCL) BSI 2016
ತಾನೇ ನೇಮಿಸಿದ ಅರಸನಿಗೆ ಆತನೀವನು ವಿಶೇಷ ರಕ್ಷಣೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಅವರು ತಮ್ಮ ಅರಸನಿಗೆ ವಿಶೇಷ ರಕ್ಷಣೆಯನ್ನು ಕೊಡುವರು; ತಮ್ಮ ಅಭಿಷಿಕ್ತನಿಗೂ, ದಾವೀದನಿಗೂ, ಅವನ ಸಂತತಿಯವರಿಗೂ ದಯೆಯನ್ನು ಯುಗಯುಗಕ್ಕೂ ಅನುಗ್ರಹಿಸುವರು.”