2 Samuel 22:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ಅವುಗಳಲ್ಲಿ ಸಿಲುಕಿಕೊಂಡಿದ್ದಾಗ ಯೆಹೋವನಿಗೆ ಪ್ರಾರ್ಥಿಸಿದೆನು. ಹೌದು, ನನ್ನ ದೇವರಿಗೆ ನಾನು ಮೊರೆಯಿಟ್ಟೆನು; ತನ್ನ ಆಲಯದಲ್ಲಿದ್ದ ಆತನಿಗೆ ನನ್ನ ಸ್ವರ ಕೇಳಿಸಿತು; ಸಹಾಯಕ್ಕಾಗಿ ನಾನಿಟ್ಟ ಮೊರೆಗೆ ಆತನು ಕಿವಿಗೊಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಂಥ ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು. ನನ್ನ ದೇವರನ್ನು ಪ್ರಾರ್ಥಿಸಿದೆನು. ಆತನು ತನ್ನ ಮಂದಿರದಲ್ಲಿ ನನ್ನ ಸ್ವರವನ್ನು ಕೇಳಿದನು. ನನ್ನ ಪ್ರಾರ್ಥನೆ ಆತನ ಸನ್ನಿಧಿಗೆ ಕೇಳಿಸಿತು.
Kannada BSI Bible 2016
ನನ್ನ ಇಕ್ಕಟ್ಟಿನಲ್ಲಿ ಕರ್ತ ನನ್ನು ಕರೆದೆನು; ನನ್ನ ದೇವರನ್ನು ಕರೆದೆನು. ಆತನು ತನ್ನ ಮಂದಿರದೊಳಗಿಂದ ನನ್ನ ಶಬ್ದವನ್ನು ಕೇಳಿದನು; ನನ್ನ ಮೊರೆಯು ಆತನ ಕಿವಿಗೆ ಮುಟ್ಟಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಂಥ ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು; ನನ್ನ ದೇವರನ್ನು ಪ್ರಾರ್ಥಿಸಿದೆನು. ಆತನು ತನ್ನ ಮಂದಿರದಲ್ಲಿ ನನ್ನ ಶಬ್ದವನ್ನು ಕೇಳಿದನು; ನನ್ನ ಕೂಗು ಆತನ ಸನ್ನಿಧಿಗೆ ಕೇಳಿಸಿತು.
Kannada Bible (KNCL) BSI 2016
ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ದೇವನಿಗೆ ಪ್ರಾರ್ಥನೆ ಮಾಡಿದೆ ಆ ಸರ್ವೇಶ್ವರನಿಗೆ. ನನ್ನ ಕೂಗು ಕೇಳಿಸಿತು ಆತನ ಮಂದಿರದಲಿ ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನನ್ನ ಇಕ್ಕಟ್ಟಿನಲ್ಲಿ ಯೆಹೋವ ದೇವರನ್ನು ಕರೆದೆನು; ನನ್ನ ದೇವರಿಗೆ ಮೊರೆಯಿಟ್ಟೆನು. ಅವರು ತಮ್ಮ ಮಂದಿರದೊಳಗಿಂದ ನನ್ನ ಧ್ವನಿಯನ್ನು ಕೇಳಿದರು; ನನ್ನ ಮೊರೆಯು ಅವರ ಕಿವಿಗೆ ಮುಟ್ಟಿತು.