2 Samuel 23:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹೊತ್ತಾರೆಯ ಬೆಳಕಿನ ಕಿರಣಗಳಂತೆಯೂ ಮೋಡಗಳೇ ಇಲ್ಲದ ಮುಂಜಾನೆಯಂತೆಯೂ ಮಳೆ ಬಿದ್ದನಂತರ ಬರುವ ಸೂರ್ಯನ ಬೆಳಕಿನಂತೆಯೂ ಗರಿಕೆಯನ್ನು ನೆಲದಿಂದ ಮೂಡಿಸುವ ಮಳೆಯಂತೆಯೂ ಇದ್ದಾನೆ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೋಡಗಳಿಲ್ಲದ ಪ್ರಾತಃಕಾಲದಲ್ಲಿ ತೇಜೋಮಯನಾಗಿ ಉದಯಿಸಿ, ಮೋಡಗಳನ್ನು ಚದುರಿಸಿಬಿಟ್ಟು, ಮಳೆಬಿದ್ದ ಭೂಮಿಯಿಂದ ಹುಲ್ಲನ್ನು ಮೊಳೆಯಿಸುವ ಸೂರ್ಯನಿಗೆ ಸಮಾನನಾಗಿದ್ದಾನೆ.
Kannada BSI Bible 2016
ಸೂರ್ಯನು ಮೂಡಿರುವಂಥ, ಪ್ರಕಾಶದಿಂದ ಮೋಡಗಳಿಲ್ಲದೆ ಇರುವಂಥ, ಉದಯ ಕಾಲದ ಬೆಳಕಿನ ಹಾಗೆಯೂ ಮಳೆ ಬಂದ ಮೇಲೆ ಭೂಮಿಯಿಂದಾಗುವ ಹುಲ್ಲಿನ ಹಾಗೆಯೂ ಇರು ವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೋಡಗಳಿಲ್ಲದ ಪ್ರಾತಃಕಾಲದಲ್ಲಿ ತೇಜೋಮಯನಾಗಿ ಉದಯಿಸಿ ಮೋಡಗಳನ್ನು ಚದರಿಸಿಬಿಟ್ಟು ಮಳೆಬಿದ್ದ ಭೂವಿುಯಿಂದ ಹುಲ್ಲನ್ನು ಮೊಳಿಸುವ ಸೂರ್ಯನಿಗೆ ಸಮಾನನಾಗಿದ್ದಾನೆ.
Kannada Bible (KNCL) BSI 2016
ದೇವರಲ್ಲಿ ಭಯಭಕ್ತಿಯುಳ್ಳ ರಾಜನು ನೀತಿಯಿಂದ ಪ್ರಜೆಗಳನಾಳುವಾತನು ಉದಯಕಾಲದ ಸೂರ್ಯನಿಗೆ ಸಮಾನನು ಏರುವನಾತ ಮೇಘರಹಿತ ಪ್ರಾತಃಕಾಲದೊಳು ತೇಜೋಮಯನಾಗಿ ಮೊಳೆಯಿಸುವನು ಪಚ್ಚೆಪಸಿರನು ಮಳೆ ತೋಯ್ದ ನೆಲದೊಳು ಹುಲುಸಾಗಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೋಡವಿಲ್ಲದ ಮುಂಜಾನೆ ಸೂರ್ಯೋದಯದ ಸಮಯದಲ್ಲಿಯ ಉದಯದ ಬೆಳಕಿನಂತಿರುವನು. ಭೂಮಿಯಿಂದ ಹುಲ್ಲು ಮೊಳೆಯಿಸುವ ಮಳೆಯ ನಂತರದ ಪ್ರಕಾಶದಂತಿರುವನು.’