2 Samuel 3:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಬ್ನೇರನು ದಾವೀದನ ಬಳಿಗೆ ಸಂದೇಶಕರನ್ನು ಕಳುಹಿಸಿ, “ಈ ದೇಶವನ್ನು ಯಾರು ಆಳಬೇಕೆಂಬದು ನಿನ್ನ ಅಭಿಪ್ರಾಯ? ನನ್ನೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡರೆ, ಇಸ್ರೇಲಿನ ಜನರೆಲ್ಲರನ್ನು ನೀನು ಆಳುವಂತೆ ಮಾಡಲು ನಾನು ಸಹಾಯ ಮಾಡುತ್ತೇನೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ಅಬ್ನೇರನು ದಾವೀದನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ದೇಶವು ಯಾರದು? ನೀನು ನನ್ನೊಡನೆ ಒಡಂಬಡಿಕೆ ಮಾಡಿಕೊಂಡರೆ ಇಸ್ರಾಯೇಲರನ್ನೆಲ್ಲಾ ನಿನ್ನ ಕಡೆಗೆ ತಿರುಗಿಸುವ ಪ್ರಯತ್ನದಲ್ಲಿ ನಾನು ನಿನ್ನ ಸಂಗಡ ಕೈಜೋಡಿಸುತ್ತೇನೆ” ಎಂದು ಹೇಳಿಸಿದನು.
Kannada BSI Bible 2016
ಆಗ ಅಬ್ನೇರನು ತನ್ನ ಪರವಾಗಿ ದಾವೀದನ ಬಳಿಗೆ ದೂತರನ್ನು ಕಳು ಹಿಸಿ--ದೇಶವು ಯಾರದು? ಇದಲ್ಲದೆ--ನೀನು ನನ್ನ ಸಂಗಡ ಒಡಂಬಡಿಕೆಯನ್ನು ಮಾಡು; ಆಗ ಇಗೋ, ಇಸ್ರಾಯೇಲ್ಯರನ್ನೆಲ್ಲಾ ನಿನ್ನ ಬಳಿಗೆ ಬರಮಾಡುವ ಹಾಗೆ ನನ್ನ ಕೈ ನಿನ್ನ ಸಂಗಡ ಇರುವದೆಂದು ಹೇಳಿರಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ಅಬ್ನೇರನು ದಾವೀದನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ - ದೇಶವು ಯಾರದು? ನೀನು ನನ್ನೊಡನೆ ಒಡಂಬಡಿಕೆ ಮಾಡಿಕೊಂಡರೆ ಇಸ್ರಾಯೇಲ್ಯರನ್ನೆಲ್ಲಾ ನಿನ್ನ ಕಡೆಗೆ ತಿರುಗಿಸುವ ಹಾಗೆ ನನ್ನ ಹಸ್ತವು ನಿನ್ನ ಸಂಗಡ ಇರುವದು ಎಂದು ಹೇಳಿಸಿದನು.
Kannada Bible (KNCL) BSI 2016
ಅನಂತರ ಅಬ್ನೇರನು ದಾವೀದನ ಬಳಿಗೆ ದೂತರನ್ನು ಕಳುಹಿಸಿ, “ಈ ನಾಡು ಯಾರದು? ನೀನು ನನ್ನೊಡನೆ ಒಪ್ಪಂದ ಮಾಡಿಕೊಂಡರೆ ಇಸ್ರಯೇಲರನ್ನೆಲ್ಲಾ ನಿನ್ನ ಕಡೆಗೆ ತಿರುಗಿಸುವೆನು. ಹಾಗು ನನ್ನ ಬೆಂಬಲ ನಿನಗಿರುವುದು,” ಎಂದು ಹೇಳಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅಬ್ನೇರನು ತನ್ನ ಪರವಾಗಿ ದಾವೀದನ ಬಳಿಗೆ ತನ್ನ ದೂತರನ್ನು ಕಳುಹಿಸಿ, “ದೇಶವು ಯಾರದು? ಇದಲ್ಲದೆ ನೀನು ನನ್ನ ಸಂಗಡ ಒಡಂಬಡಿಕೆಯನ್ನು ಮಾಡು. ಆಗ ಇಗೋ, ಇಸ್ರಾಯೇಲರನ್ನೆಲ್ಲಾ ನಿನ್ನ ಬಳಿಗೆ ಬರಮಾಡುವ ಹಾಗೆ ನನ್ನ ಕೈ ನಿನ್ನ ಸಂಗಡ ಇರುವುದೆಂದು ಹೇಳಿರಿ,” ಎಂದನು.