2 Samuel 3:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅದಕ್ಕೆ ದಾವೀದನು, “ಒಳ್ಳೆಯದು! ನಾನು ನಿನ್ನೊಡನೆ ಒಪ್ಪಂದ ಮಾಡಿಕೊಳ್ಳುತ್ತೇನೆ. ಆದರೆ ನೀನು ನನಗಾಗಿ ಒಂದು ಕೆಲಸ ಮಾಡಬೇಕು. ಸೌಲನ ಮಗಳಾದ ಮೀಕಲಳನ್ನು ನನ್ನ ಬಳಿಗೆ ಕರೆತರುವ ತನಕ ನಾನು ನಿನ್ನನ್ನು ಸಂಧಿಸುವುದಿಲ್ಲ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ದಾವೀದನು, “ಒಳ್ಳೆಯದು, ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ. ಆದರೆ ನಿನ್ನಿಂದ ನನಗೆ ಒಂದು ಸಹಾಯ ಬೇಕು. ನನ್ನನ್ನು ನೋಡುವುದಕ್ಕೆ ಬರುವಾಗ ಸೌಲನ ಮಗಳಾದ ಮೀಕಲಳನ್ನು ಕರೆದುಕೊಂಡು ಬರಬೇಕು. ಹಾಗೆ ಕರೆದುಕೊಂಡು ಬಾರದಿದ್ದರೆ, ನೀನು ನನ್ನ ಮುಖವನ್ನು ನೋಡಕೂಡದು” ಎಂದು ಉತ್ತರಕೊಟ್ಟನು.
Kannada BSI Bible 2016
ಅದಕ್ಕವನು--ಒಳ್ಳೇದು, ನಾನು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವೆನು; ಆದರೆ ಒಂದನ್ನು ನಾನು ನಿನ್ನನ್ನು ಕೇಳುತ್ತೇನೆ; ಏನಂದರೆ, ನೀನು ನನ್ನ ಮುಖವನ್ನು ನೋಡುವದಕ್ಕೆ ಬರುವಾಗ ಸೌಲನ ಮಗಳಾದ ವಿಾಕಲಳನ್ನು ನೀನು ಕರಕೊಂಡು ಬಾರದೆ ಹೋದರೆ ನೀನು ನನ್ನ ಮುಖವನ್ನು ನೋಡಬಾರದು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ದಾವೀದನು - ಒಳ್ಳೇದು, ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಆದರೆ ನೀನು ಒಂದು ಮಾಡಬೇಕು. ನನ್ನನ್ನು ನೋಡುವದಕ್ಕೆ ಬರುವಾಗ ಸೌಲನ ಮಗಳಾದ ಮೀಕಲಳನ್ನು ಕರಕೊಂಡು ಬರಬೇಕು; ಹಾಗೆ ಕರಕೊಂಡು ಬಾರದಿದ್ದರೆ ನೀನು ನನ್ನ ಮೋರೆಯನ್ನು ನೋಡಕೂಡದು ಎಂದು ಉತ್ತರ ಕೊಟ್ಟನು.
Kannada Bible (KNCL) BSI 2016
ಅದಕ್ಕೆ ದಾವೀದನು, “ಒಳ್ಳೆಯದು, ನಿನ್ನ ಸಂಗಡ ಒಪ್ಪಂದಮಾಡಿಕೊಳ್ಳುತ್ತೇನೆ; ಆದರೆ ನೀನು ಒಂದು ಕಾರ್ಯವನ್ನು ಮಾಡಬೇಕು; ನನ್ನನ್ನು ನೋಡುವುದಕ್ಕೆ ಬರುವಾಗ ಸೌಲನ ಮಗಳಾದ ಮೀಕಲಳನ್ನು ಕರೆದುಕೊಂಡು ಬರಬೇಕು. ಹಾಗೆ ಕರೆದುಕೊಂಡು ಬಾರದಿದ್ದರೆ ನೀನು ನನ್ನ ಮುಖವನ್ನು ನೋಡಕೂಡದು,” ಎಂದು ಉತ್ತರಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ದಾವೀದನು, “ಒಳ್ಳೆಯದು, ನಾನು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವೆನು. ಆದರೆ ನಾನು ನಿನ್ನಲ್ಲಿ ಒಂದನ್ನು ಕೇಳುತ್ತೇನೆ.” ಏನೆಂದರೆ, “ನೀನು ನನ್ನನ್ನು ನೋಡುವುದಕ್ಕೆ ಬರುವಾಗ, ಸೌಲನ ಮಗಳಾದ ಮೀಕಲಳನ್ನು ನೀನು ಕರೆದುಕೊಂಡು ಬಾರದೆ ಹೋದರೆ, ನೀನು ನನ್ನ ಮುಖವನ್ನು ಕಾಣಬಾರದು,” ಎಂದನು.