2 Samuel 3:26 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೋವಾಬನು ದಾವೀದನನ್ನು ಬಿಟ್ಟು, ಅಬ್ನೇರನನ್ನು ಸಿರಾ ಬಾವಿಯ ಬಳಿಯಿಂದ ಕರೆತರಲು ದೂತರನ್ನು ಕಳುಹಿಸಿದನು. ಅಬ್ನೇರನನ್ನು ದೂತರು ಹಿಂದಕ್ಕೆ ಕರೆತಂದರು. ಈ ಸಂಗತಿಯು ದಾವೀದನಿಗೆ ತಿಳಿದಿರಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೋವಾಬನು ದಾವೀದನನ್ನು ಬಿಟ್ಟು, ಹೊರಗೆ ಹೋಗಿ, ಅಬ್ನೇರನನ್ನು ಕರೆತರುವಂತೆ ದೂತರನ್ನು ಕಳುಹಿಸಿದನು. ಇವರು ಹೋಗಿ ಸಿರಾ ಬಾವಿಯ ಬಳಿಯಿಂದ ಅವನನ್ನು ಕರೆದುಕೊಂಡು ಬಂದರು. ಇದು ದಾವೀದನಿಗೆ ಗೊತ್ತಿರಲಿಲ್ಲ.
Kannada BSI Bible 2016
ಯೋವಾಬನು ದಾವೀದನನ್ನು ಬಿಟ್ಟು ಹೊರಟುಬಂದು ಅವನು ಅಬ್ನೇರನ ಹಿಂದೆ ದೂತರನ್ನು ಕಳುಹಿಸಿದನು; ಅವರು ಅವನನ್ನು ಸಿರಾ ಬಾವಿಯ ಬಳಿಯಿಂದ ತಿರಿಗಿ ಕರಕೊಂಡು ಬಂದರು. ಆದರೆ ದಾವೀದನಿಗೆ ಅದು ತಿಳಿಯದೆ ಇತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ದಾವೀದನನ್ನು ಬಿಟ್ಟು ಹೊರಗೆ ಹೋಗಿ ಅಬ್ನೇರನನ್ನು ಕರತರುವಂತೆ ದೂತರನ್ನು ಅಟ್ಟಿದನು. ಇವರು ಹೋಗಿ ಸಿರಾ ಬಾವಿಯ ಬಳಿಯಿಂದ ಅವನನ್ನು ಕರಕೊಂಡುಬಂದರು. ಇದು ದಾವೀದನಿಗೆ ಗೊತ್ತಿರಲಿಲ್ಲ.
Kannada Bible (KNCL) BSI 2016
ಅನಂತರ ದಾವೀದನನ್ನು ಬಿಟ್ಟು ಹೊರಗೆ ಹೋಗಿ ಅಬ್ನೇರನನ್ನು ಕರೆದುತರುವಂತೆ ದೂತರನ್ನು ಅಟ್ಟಿದನು. ಇವರು ಹೋಗಿ ಸಿರಾ ಬಾವಿಯ ಬಳಿಯಿಂದ ಅವನನ್ನು ಕರೆದುಕೊಂಡುಬಂದರು. ಇದು ದಾವೀದನಿಗೆ ಗೊತ್ತಿರಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೋವಾಬನು ದಾವೀದನನ್ನು ಬಿಟ್ಟು ಹೊರಟುಬಂದಾಗ, ಅವನು ಅಬ್ನೇರನ ಹಿಂದೆ ದೂತರನ್ನು ಕಳುಹಿಸಿದನು. ಅವರು ಅವನನ್ನು ಸಿರಾ ಎಂಬ ಬಾವಿಯಿಂದ ತಿರುಗಿ ಕರೆದುಕೊಂಡು ಬಂದರು. ಆದರೆ ದಾವೀದನಿಗೆ ಅದು ತಿಳಿಯದೆ ಇತ್ತು.