2 Samuel 3:38 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ರಾಜನಾದ ದಾವೀದನು ತನ್ನ ಸೇವಕರಿಗೆ, “ಇಸ್ರೇಲಿನಲ್ಲಿ ಇಂದು ಮಹಾಪುರುಷನಾದ ನಾಯಕನೊಬ್ಬನು ಸತ್ತನೆಂಬುದು ನಿಮಗೆಲ್ಲ ತಿಳಿದಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಸನು ತನ್ನ ಸೇವಕರಿಗೆ, “ಈ ದಿನ ಇಸ್ರಾಯೇಲರಲ್ಲಿ ಹತವಾದವನು, ಪ್ರಭುವೂ, ಮಹಾಪುರುಷನೂ ಆಗಿದ್ದಾನೆಂಬುದು ನಿಮಗೆ ಗೊತ್ತಿದೆಯಲ್ಲಾ.
Kannada BSI Bible 2016
ಇದಲ್ಲದೆ ಅರಸನು ತನ್ನ ಸೇವಕರಿಗೆ--ಇಸ್ರಾಯೇಲಿನಲ್ಲಿ ಈ ಹೊತ್ತು ಪ್ರಧಾನನೂ ದೊಡ್ಡವನೂ ಬಿದ್ದಿದ್ದಾನೆಂದು ಗೊತ್ತಿ ಲ್ಲವೋ?ನಾನು ಅರಸನಾಗಿ ಅಭಿಷೇಕಿಸ ಲ್ಪಟ್ಟಿದ್ದರೂ ಇಂದಿಗೆ ದುರ್ಬಲನಾಗಿದ್ದೇನೆ. ಚೆರೂಯಳ ಕುಮಾರ ರಾದ ಈ ಮನುಷ್ಯರು ನನಗೆ ಕಠಿಣರಾಗಿದ್ದಾರೆ. ಕೆಟ್ಟತನ ಮಾಡುವವನಿಗೆ ಕರ್ತನು ಅವನ ಕೆಟ್ಟತನಕ್ಕೆ ಸರಿಯಾಗಿ ಪ್ರತಿಫಲ ಕೊಡುವನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರಸನು ತನ್ನ ಸೇವಕರಿಗೆ - ಈ ಹೊತ್ತು ಇಸ್ರಾಯೇಲ್ಯರಲ್ಲಿ ಹತವಾದವನು ಪ್ರಭುವೂ ಮಹಾಪುರುಷನೂ ಆಗಿದ್ದಾನೆಂಬದು ನಿಮಗೆ ಗೊತ್ತುಂಟಲ್ಲಾ;
Kannada Bible (KNCL) BSI 2016
ಅರಸನು ತನ್ನ ಸೇವಕರಿಗೆ, “ಈ ದಿನ ಇಸ್ರಯೇಲರಲ್ಲಿ ಹತನಾದವನು ಒಬ್ಬ ಶ್ರೇಷ್ಠನಾಯಕ ಹಾಗು ಮಹಾಪುರುಷ ಆಗಿದ್ದನೆಂಬುದು ನಿಮಗೆ ಗೊತ್ತಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅರಸನು ತನ್ನ ಸೇವಕರಿಗೆ, “ಇಸ್ರಾಯೇಲಿನಲ್ಲಿ ಈ ಹೊತ್ತು ಪ್ರಧಾನನೂ ದೊಡ್ಡವನೂ ಬಿದ್ದಿದ್ದಾನೆಂದು ಗೊತ್ತಿಲ್ಲವೋ?