2 Samuel 4:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬಾಣನು ಮತ್ತು ರೇಕಾಬನು ಗೋಧಿಯನ್ನು ತೆಗೆದುಕೊಳ್ಳುವವರಂತೆ ಮನೆಯ ಮಧ್ಯಭಾಗಕ್ಕೆ ಬಂದರು. ಈಷ್ಬೋಶೆತನು ಮಲಗುವ ಕೋಣೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದನು. ರೇಕಾಬನು ಮತ್ತು ಬಾಣನು ಈಷ್ಬೋಶೆತನನ್ನು ಇರಿದು ಕೊಂದರು. ನಂತರ ಅವರು ಅವನ ತಲೆಯನ್ನು ಕತ್ತರಿಸಿ ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ಅವರು ಜೋರ್ಡನ್ ಕಣಿವೆಯಲ್ಲಿ ರಾತ್ರಿಯೆಲ್ಲಾ ಪ್ರಯಾಣಮಾಡಿ (Verses 6-7)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಬಾಗಿಲು ಕಾಯುವವಳು ಗೋದಿ ಕೇರುತ್ತಿದ್ದು ಹಾಗೆಯೇ ತೂಕಡಿಸಿ ನಿದ್ದೆಮಾಡುತ್ತಿರುವುದನ್ನು ಬಾಣ ಮತ್ತು ರೇಕಾಬರು ಕಂಡು ರಹಸ್ಯವಾಗಿ ಒಳಗೆ ಜಾರಿಕೊಂಡರು.
Kannada BSI Bible 2016
ಗೋಧಿಯನ್ನು ತಕ್ಕೊಂಡು ಹೋಗುವವರಾಗಿ ನಡು ಮನೆಯೊಳಗೆ ಬಂದು ಅವನ ಐದನೇ ಎಲುಬಿನ ಸಂದಿನಲ್ಲಿ ತಿವಿದರು. ರೇಕಾಬನೂ ಅವನ ಸಹೋದರನಾದ ಬಾಣನೂ ತಪ್ಪಿಸಿಕೊಂಡು ಹೋದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಬಾಗಲುಕಾಯುವವಳು ಗೋದಿ ಕೇರುತ್ತಿದ್ದು ಹಾಗೆಯೇ ತೂಗಡಿಸಿ ನಿದ್ರೆಮಾಡುತ್ತಿರುವದನ್ನು ಅವರು ಕಂಡು ರಹಸ್ಯವಾಗಿ ಒಳಗೆ ಬಂದು
Kannada Bible (KNCL) BSI 2016
ಆಗ ಬಾಗಿಲು ಕಾಯುವವಳು ಗೋದಿ ಕೇರುತ್ತಿದ್ದು ಹಾಗೆಯೇ ತೂಗಡಿಸಿ ನಿದ್ರೆಮಾಡುತ್ತಿರುವುದನ್ನು ಕಂಡು ಅವರು ಗುಟ್ಟಾಗಿ ಒಳಗೆ ಜಾರಿಕೊಂಡರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಗೋಧಿಯನ್ನು ತೆಗೆದುಕೊಂಡು ಹೋಗುವವರಂತೆ ನಡುಮನೆಯೊಳಗೆ ಹೋಗಿ ಅವನ ಹೊಟ್ಟೆಯಲ್ಲಿ ತಿವಿದರು. ರೇಕಾಬನೂ ಅವನ ಸಹೋದರ ಬಾಣನೂ ಗುಟ್ಟಾಗಿ ಒಳಗೆ ಜಾರಿಕೊಂಡರು.