2 Samuel 5:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹಿಂದಿನ ದಿನಗಳಲ್ಲಿ, ಸೌಲನು ರಾಜನಾಗಿದ್ದಾಗಲೂ ನಮ್ಮನ್ನು ಯುದ್ಧದಲ್ಲಿ ಮುನ್ನಡೆಸಿದವನು ನೀನೇ. ಯೆಹೋವನು ನಿನ್ನನ್ನು ಕುರಿತು, ‘ನೀನು ನನ್ನ ಜನರಾದ ಇಸ್ರೇಲರ ನಾಯಕನೂ ಪಾಲಕನೂ ಆಗಿರುವೆ’ ಎಂದು ಹೇಳಿದ್ದಾನೆ” ಎಂದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹಿಂದಿನ ದಿನಗಳಲ್ಲಿ ಅಂದರೆ, ಸೌಲನ ಆಡಳಿತದಲ್ಲಿ, ಇಸ್ರಾಯೇಲರ ದಳಾಧಿಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವನು ನೀನೇ. ನಿನ್ನನ್ನು ಕುರಿತು ಯೆಹೋವನು, ‘ನೀನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನೂ ಪಾಲಕನೂ ಆಗಿರುವಿಯೆಂದು ಹೇಳಿದ್ದಾನೆ’” ಅಂದರು.
Kannada BSI Bible 2016
ಇದಲ್ಲದೆ ಪೂರ್ವದಲ್ಲಿ ಸೌಲನು ನಮ್ಮ ಮೇಲೆ ಅರಸನಾಗಿದ್ದಾಗ ನೀನು ಇಸ್ರಾಯೇಲನ್ನು ಹೊರಗೆ ನಡಿಸುವವನಾಗಿಯೂ ಒಳಗೆ ತರುವವನಾಗಿಯೂ ಆಗಿದ್ದಿ. ಆದದರಿಂದ ಕರ್ತನು ನಿನಗೆ--ನೀನು ನನ್ನ ಜನರಾದ ಇಸ್ರಾಯೇ ಲನ್ನು ಮೇಯಿಸುವಿ; ಇಸ್ರಾಯೇಲಿನ ಮೇಲೆ ನಾಯಕನಾಗಿರುವಿ ಎಂದು ಹೇಳಿದನು ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾವು ನಿನ್ನ ರಕ್ತಸಂಬಂಧಿಗಳಾಗಿದ್ದೇವೆ; ಹಿಂದಿನ ದಿವಸಗಳಲ್ಲಿ ಅಂದರೆ ಸೌಲನ ಆಳಿಕೆಯಲ್ಲಿ ಇಸ್ರಾಯೇಲ್ಯರ ದಳಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವನು ನೀನೇ. ನಿನ್ನನ್ನು ಕುರಿತು ಯೆಹೋವನು - ನೀನು ನನ್ನ ಪ್ರಜೆಗಳಾದ ಇಸ್ರಾಯೇಲ್ಯರ ನಾಯಕನೂ ಪಾಲಕನೂ ಆಗಿರುವಿಯೆಂದು ಹೇಳಿದ್ದಾನಷ್ಟೆ ಅಂದರು.
Kannada Bible (KNCL) BSI 2016
ಹಿಂದಿನ ದಿವಸಗಳಲ್ಲಿ, ಅಂದರೆ ಸೌಲನ ಆಳ್ವಿಕೆಯಲ್ಲಿ, ಇಸ್ರಯೇಲರ ದಳಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವರು ನೀವೇ. ನಿಮ್ಮನ್ನು ಕುರಿತು ಸರ್ವೇಶ್ವರಸ್ವಾಮಿ, ‘ನೀನು ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನೂ ಪಾಲಕನೂ ಆಗಿರುವೆ,’ ಎಂದು ವಾಗ್ದಾನಮಾಡಿದ್ದಾರೆ,” ಎಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಪೂರ್ವದಲ್ಲಿ ಸೌಲನು ನಮ್ಮ ಮೇಲೆ ಅರಸನಾಗಿದ್ದಾಗ, ನೀನು ದಳಪತಿಯಾಗಿ ಇಸ್ರಾಯೇಲನ್ನು ಹೊರಗೆ ನಡೆಸುವವನಾಗಿಯೂ ಒಳಗೆ ತರುವವನಾಗಿಯೂ ಇದ್ದವನು. ಆದ್ದರಿಂದ ಯೆಹೋವ ದೇವರು ನಿನಗೆ, ‘ನೀನು ನನ್ನ ಜನರಾದ ಇಸ್ರಾಯೇಲರ ನಾಯಕನೂ ಪಾಲಕನೂ ಆಗಿರುವೆ ಎಂದು ಹೇಳಿದರು,’ ” ಎಂದರು.