2 Samuel 5:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದಾವೀದನು ತನ್ನ ಜನರಿಗೆ ಅಂದು, “ನೀವು ಯೆಬೂಸಿಯರನ್ನು ಸೋಲಿಸಬೇಕೆಂದಿದ್ದರೆ ಜಲಮಾರ್ಗದ ಮೂಲಕ ಬರಲಾಗದು” ಎಂಬ ನಾಣ್ಣುಡಿ ಉಂಟಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ದಿನ ದಾವೀದನು, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು, ಜಲದ್ವಾರದ ಮೂಲಕ ಹತ್ತಿ ಹೋಗಿ, ನನ್ನನ್ನು ದ್ವೇಷಿಸುವ ಕುರುಡರನ್ನು ಮತ್ತು ಕುಂಟರನ್ನು ಕಂದಕದಲ್ಲಿ ನಾಶಪಡಿಸಬೇಕು” ಎಂದು ಹೇಳಿದನು. ಆದುದರಿಂದ “ಕುರುಡರೂ ಕುಂಟರೂ ಅರಮನೆಯ ಒಳಗೆ ಬರಲಾಗದು” ಎಂಬ ಗಾದೆಯುಂಟು.
Kannada BSI Bible 2016
ಆ ದಿವಸದಲ್ಲಿ ದಾವೀದನುಕಂದಕವನ್ನು ದಾಟಿ ಯೆಬೂಸಿಯರನ್ನು ಅಂದರೆ ದಾವೀದನ ಪ್ರಾಣ ದ್ವೇಷಿಗಳಾದ ಕುಂಟರನ್ನೂ ಕುರು ಡರನ್ನೂ ಹೊಡೆಯುವವನು (ಮುಖ್ಯಸ್ಥನೂ ಅಧಿ ಪತಿಯೂ ಆಗಿರುವನು) ಎಂದು ಹೇಳಿದ್ದನು. ಅದಕ್ಕೆ ಅವರು--ಕುರುಡರೂ ಕುಂಟರೂ ಮನೆಯೊಳಗೆ ಬರಕೂಡದು ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ದಿವಸ ದಾವೀದನು - ಯೆಬೂಸಿಯರನ್ನು ಜಯಿಸಬೇಕೆಂದಿರುವವನು ಜಲದ್ವಾರದಲ್ಲಿ ಹತ್ತಿಹೋಗಿ ದಾವೀದನಿಗೆ ಅಸಹ್ಯರಾಗಿರುವ ಕುರುಡರನ್ನೂ ಕುಂಟರನ್ನೂ ಕಂದಕದಲ್ಲಿ ನಾಶಮಾಡಿಬಿಡಲಿ ಎಂದು ಹೇಳಿದನು. ಆದದರಿಂದ ಕುರುಡರೂ ಕುಂಟರೂ ಇದ್ದಾರೆ, ಒಳಗೆ ಹೋಗಲಾಗದು ಎಂದು ಗಾದೆಯುಂಟು.
Kannada Bible (KNCL) BSI 2016
ಆ ದಿವಸ ದಾವೀದನು, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು ಜಲದ್ವಾರದಲ್ಲೆ ಹತ್ತಿ ಹೋಗಿ ನನ್ನನ್ನು ದ್ವೇಷಿಸುವ ಕುರುಡರನ್ನೂ ಕುಂಟರನ್ನೂ ಕಂದಕದಲ್ಲಿ ನಾಶಮಾಡಿಬಿಡಲಿ,” ಎಂದು ಹೇಳಿದನು. ಆದುದರಿಂದಲೇ “ಕುರುಡರೂ ಕುಂಟರೂ ದೇವಾಲಯದೊಳಗೆ ಹೋಗಲಾಗದು,” ಎಂಬ ಹೇಳಿಕೆಯುಂಟು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದಿವಸದಲ್ಲಿ ದಾವೀದನು, “ಜಲದ್ವಾರವನ್ನು ದಾಟಿ, ಯೆಬೂಸಿಯರನ್ನು ಜಯಿಸಬೇಕೆಂದಿರುವವನು, ಜಲದ್ವಾರದ ಮೂಲಕ ಹತ್ತಿ ಹೋಗಿ, ನನ್ನನ್ನು ದ್ವೇಷಿಸುವ ಕುರುಡರನ್ನೂ ಕುಂಟರನ್ನೂ ನಾಶಮಾಡಲಿ,” ಎಂದು ಹೇಳಿದ್ದನು. ಆದುದರಿಂದಲೇ, “ಕುರುಡರೂ ಕುಂಟರೂ ಅರಮನೆಯೊಳಗೆ ಪ್ರವೇಶಿಸಲಾರರು,” ಎಂಬ ಗಾದೆಯಾಯಿತು.