2 Samuel 7:28 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನನ್ನ ಒಡೆಯನಾದ ಯೆಹೋವನೇ, ನೀನೇ ದೇವರು. ನಿನ್ನ ಮಾತುಗಳು ಸತ್ಯವಾದವು. ನಿನ್ನ ಸೇವಕನಾದ ನನಗೆ ಅತೀ ಉತ್ತಮವಾದ ವಾಗ್ದಾನಗಳನ್ನು ಮಾಡಿರುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕರ್ತನೇ, ಯೆಹೋವನೇ! ನಿನ್ನ ಸೇವಕನಿಗೆ ಈ ಶ್ರೇಷ್ಠ ವಾಗ್ದಾನಗಳನ್ನು ಮಾಡಿದ ನೀನು ದೇವರಾಗಿರುತ್ತೀ. ನಿನ್ನ ವಾಕ್ಯವು ಸತ್ಯವಾದದ್ದು.
Kannada BSI Bible 2016
ಈಗ ಓ ಕರ್ತನಾದ ದೇವರೇ, ನೀನೇ ದೇವರಾದಾತನು, ನಿನ್ನ ವಾಕ್ಯಗಳು ಸತ್ಯವು; ನಿನ್ನ ದಾಸನಿಗೆ ಈ ಒಳ್ಳೇದನ್ನು ವಾಗ್ದಾನಮಾಡಿದಿ.ಆದಕಾರಣ ಈಗ ನಿನ್ನ ದಾಸನ ಮನೆಯು ನಿನ್ನ ಮುಂದೆ ಸದಾಕಾಲಕ್ಕೂ ಇರುವ ಹಾಗೆ ಅದನ್ನು ಆಶೀರ್ವದಿಸಲು ನಿನ್ನ ಚಿತ್ತವಾಗಿರಲಿ, ಯಾಕಂದರೆ ಓ ಕರ್ತನಾದ ದೇವರೇ, ನೀನು ಅದನ್ನು ಹೇಳಿದಿ; ನಿನ್ನ ದಾಸನ ಮನೆಯು ಸದಾಕಾಲವೂ ನಿನ್ನ ಆಶೀರ್ವಾದದಿಂದ ಆಶೀರ್ವದಿಸಲ್ಪಟ್ಟಿರಲಿ ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕರ್ತನೇ, ಯೆಹೋವನೇ, ನಿನ್ನ ಸೇವಕನಿಗೆ ಈ ಶ್ರೇಷ್ಠ ವಾಗ್ದಾನಗಳನ್ನು ಮಾಡಿದ ನೀನು ದೇವರಾಗಿರುತ್ತೀ; ನಿನ್ನ ವಾಕ್ಯವು ಸತ್ಯವಾದದ್ದು.
Kannada Bible (KNCL) BSI 2016
ಸರ್ವೇಶ್ವರಾ, ಸರ್ವೇಶ್ವರಾ, ನೀವು ನಮ್ಮ ದೇವರು; ನಿಮ್ಮ ವಾಕ್ಯ ಸತ್ಯವಾದದ್ದು; ತಮ್ಮ ದಾಸನಾದ ನನಗೆ ಇಂಥ ಶ್ರೇಷ್ಠ ವಾಗ್ದಾನ ಮಾಡಿದ್ದೀರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಾರ್ವಭೌಮ ಯೆಹೋವ ದೇವರೇ, ನಿಮ್ಮ ವಾಕ್ಯಗಳು ಸತ್ಯವಾದದ್ದು. ನಿಮ್ಮ ಸೇವಕನಿಗೆ ಈ ಒಳ್ಳೆಯ ಸಂಗತಿಗಳನ್ನು ವಾಗ್ದಾನಮಾಡಿದ ನೀವು ದೇವರಾಗಿದ್ದೀರಿ.