2 Thessalonians 2:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸತ್ಯವನ್ನು ಪ್ರೀತಿಸದೆ ತಪ್ಪಿಹೋಗಿರುವ ಜನರನ್ನು ಮೋಸಗೊಳಿಸಲು, ಅವನು ಎಲ್ಲಾ ವಿಧವಾದ ತಂತ್ರಗಳನ್ನು ಮಾಡುವನು. (ಅವರು ಸತ್ಯವನ್ನು ಪ್ರೀತಿಸಿದ್ದರೆ, ರಕ್ಷಣೆ ಹೊಂದುತ್ತಿದ್ದರು.)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ ನಾಶದ ಮಾರ್ಗದಲ್ಲಿರುವವರಿಗೋಸ್ಕರವಾಗಿ ಬರುವನು. ಯಾಕೆಂದರೆ ಅವರು ಸತ್ಯವನ್ನು ಪ್ರೀತಿಸದೆ ನಿರಾಕರಿಸಿದ್ದರಿಂದ ರಕ್ಷಣೆಯನ್ನು ಹೊಂದದೆ ನಾಶವಾಗುತ್ತಾರೆ.
Kannada BSI Bible 2016
ದುರ್ನೀತಿಯ ಎಲ್ಲಾ ವಂಚನೆ ಯಿಂದಲೂ ಕೂಡಿ ನಾಶವಾಗುವವರಲ್ಲಿ ಸಂಭವಿಸು ವದು; ಅವರು ಪ್ರೀತಿಯ ಸತ್ಯವನ್ನು ಅಂಗೀಕರಿಸದ ಕಾರಣ ರಕ್ಷಣೆಯನ್ನು ಹೊಂದುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಸತ್ಯದ ಮೇಲೆ ಪ್ರೀತಿಯನ್ನಿಡದ ಕಾರಣದಿಂದ ರಕ್ಷಣೆಯನ್ನು ಹೊಂದದೆ ನಾಶವಾಗುತ್ತಾರೆ.
Kannada Bible (KNCL) BSI 2016
ಸತ್ಯವನ್ನು ಪ್ರೀತಿಸದೆ, ಜೀವೋದ್ಧಾರವನ್ನು ನಿರಾಕರಿಸಿ, ವಿನಾಶದ ಮಾರ್ಗದಲ್ಲಿರುವವರನ್ನು ಎಲ್ಲಾ ತರಹದ ಕುಯುಕ್ತಿಯಿಂದ ಅವನು ವಂಚಿಸುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಎಲ್ಲಾ ವಿಧವಾದ ದುಷ್ಟತನದ ವಂಚನೆಯಿಂದಲೂ ಕೂಡಿ ನಾಶವಾಗುವವರಲ್ಲಿ ಇದು ಸಂಭವಿಸುವುದು. ಏಕೆಂದರೆ ಅವರು ರಕ್ಷಣೆ ಹೊಂದುವಂತೆ ಸತ್ಯವನ್ನು ಪ್ರೀತಿಸಲು ನಿರಾಕರಿಸಿದ ಕಾರಣದಿಂದ ನಾಶವಾಗಿ ಹೋಗುವರು.