2 Timothy 2:22 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯುವಕರು ಇಷ್ಟಪಡುವ ಕೆಟ್ಟಕಾರ್ಯಗಳಿಂದ ನೀನು ದೂರವಾಗಿರು. ಪ್ರೀತಿ, ನಂಬಿಕೆ ಮತ್ತು ಶಾಂತಿಯನ್ನು ಹೊಂದಿದವನಾಗಿದ್ದು ಯೋಗ್ಯವಾದ ರೀತಿಯಲ್ಲಿ ಜೀವಿಸಲು ಬಹಳವಾಗಿ ಪ್ರಯತ್ನಪಡು. ಪ್ರಭುವಿನಲ್ಲಿ ಭರವಸವಿಟ್ಟಿರುವ ಮತ್ತು ಪರಿಶುದ್ಧ ಹೃದಯ ಹೊಂದಿರುವ ಜನರೊಂದಿಗೆ ಒಟ್ಟುಗೂಡಿ ಈ ಕಾರ್ಯಗಳನ್ನು ಮಾಡು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಯೌವನದ ಮೋಹಗಳಿಗೆ ದೂರವಾಗಿರು. ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ನೀತಿ, ನಂಬಿಕೆ, ಪ್ರೀತಿ ಮತ್ತು ಸಮಾಧಾನಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.
Kannada BSI Bible 2016
ಯೌವನದ ಇಚ್ಚೆಗಳಿಂದ ಸಹ ಓಡಿಹೋಗು; ಶುದ್ಧ ಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳು ವವರ ಸಂಗಡ ನೀತಿ ವಿಶ್ವಾಸ ಪ್ರೀತಿ ಸಮಾಧಾನ ಇವುಗಳನ್ನು ಅನುಸರಿಸು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಯೌವನದ ಇಚ್ಫೆಗಳಿಗೆ ದೂರವಾಗಿರು; ನೀತಿ ವಿಶ್ವಾಸ ಪ್ರೀತಿ ಮತ್ತು ಸಮಾಧಾನವನ್ನು ಸಂಪಾದಿಸುವದಕ್ಕೆ ಶುದ್ಧ ಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ಪ್ರಯಾಸಪಡು.
Kannada Bible (KNCL) BSI 2016
ನೀನು ಯೌವನದ ಭಾವೋದ್ರೇಕಗಳಿಗೆ ತುತ್ತಾಗದೆ ಧರ್ಮ, ವಿಶ್ವಾಸ, ಪ್ರೀತಿ ಮತ್ತು ಶಾಂತಿ - ಇವುಗಳನ್ನು ರೂಢಿಸಿಕೋ. ಈ ದಿಸೆಯಲ್ಲಿ ಶುದ್ಧ ಹೃದಯದಿಂದ ದೇವರನ್ನು ಅರಸುವವನು ನಿನಗೆ ಆದರ್ಶವಾಗಿರಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೌವನದ ಆಶೆಗಳನ್ನು ಬಿಟ್ಟು ಓಡಿಹೋಗು. ಶುದ್ಧ ಹೃದಯವುಳ್ಳವರಾಗಿ ಕರ್ತ ಯೇಸುವನ್ನು ಬೇಡಿಕೊಳ್ಳುವವರ ಸಂಗಡ ನೀತಿ, ವಿಶ್ವಾಸ, ಪ್ರೀತಿ, ಸಮಾಧಾನ ಇವುಗಳನ್ನು ಬೆನ್ನಟ್ಟು.