2 Timothy 3:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರ ಕಾರ್ಯಗಳಲ್ಲಿ ಅವರಿಗೆ ಯಶಸ್ಸಾಗುವುದಿಲ್ಲ. ಅವರು ಮೂರ್ಖರೆಂಬುದು ಜನರೆಲ್ಲರಿಗೂ ಕಾಣುತ್ತದೆ. ಯನ್ನ, ಯಂಬ್ರರಿಗೆ ಹೀಗೆಯೇ ಆಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಅವರು ಹೆಚ್ಚು ಮುಂದುವರಿಯಲು ಸಾಧ್ಯವಿಲ್ಲ. ಆ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪ್ರಕಟವಾಗಿ ಬಂದ ಹಾಗೆಯೇ ಇವರದೂ ಪ್ರಕಟವಾಗುವುದು.
Kannada BSI Bible 2016
ಆದರೆ ಇವರು ಇನ್ನು ಮುಂದುವರಿಯಲಾರರು; ಈ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪರಿಷ್ಕಾರವಾಗಿ ತಿಳಿದು ಬಂದ ಪ್ರಕಾರ ಇವರದೂ ತಿಳಿದುಬರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಅವರ ಪ್ರಯತ್ನವು ಇನ್ನು ಸಾಗುವದಿಲ್ಲ; ಆ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪರಿಷ್ಕಾರವಾಗಿ ತಿಳಿದುಬಂದ ಪ್ರಕಾರ ಇವರದೂ ತಿಳಿದುಬರುವದು.
Kannada Bible (KNCL) BSI 2016
ದುರ್ಮತಿಗಳೂ ವಿಶ್ವಾಸಭ್ರಷ್ಟರೂ ಆಗಿದ್ದಾರೆ. ಆದರೆ ಅವರ ಮೂರ್ಖತನ ದೀರ್ಘಕಾಲ ಬಾಳದು. ಯನ್ನ ಮತ್ತು ಯಂಬ್ರಳ ದೋಷದಂತೆ ಅದು ಸರ್ವರಿಗೂ ಬಟ್ಟಬಯಲಾಗುತ್ತದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಇವರು ಇನ್ನು ಮುಂದುವರಿಯಲಾರರು. ಯನ್ನ, ಯಂಬ್ರರ ಮೂರ್ಖತನವು ಎಲ್ಲರಿಗೂ ಸ್ಪಷ್ಟವಾಗಿ ತಿಳಿದುಬಂದಂತೆಯೇ, ಇವರದೂ ತಿಳಿದುಬರುವುದು.