Acts 10:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಜನರು, “ಕೊರ್ನೇಲಿಯ ಎಂಬ ಒಬ್ಬ ಸೇನಾಧಿಕಾರಿ ಇದ್ದಾನೆ. ಅವನು ಧಾರ್ಮಿಕ ವ್ಯಕ್ತಿ. ಅವನು ದೇವರನ್ನು ಆರಾಧಿಸುತ್ತಾನೆ. ಯೆಹೂದ್ಯ ಜನರೆಲ್ಲರೂ ಅವನನ್ನು ಗೌರವಿಸುತ್ತಾರೆ. ನಿನ್ನನ್ನು ತನ್ನ ಮನೆಗೆ ಆಹ್ವಾನಿಸಿ ನೀನು ಹೇಳುವ ಸಂಗತಿಗಳನ್ನು ಕೇಳಬೇಕೆಂದು ದೇವದೂತನೊಬ್ಬನು ಕೊರ್ನೇಲಿಯನಿಗೆ ತಿಳಿಸಿದ್ದಾನೆ” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು; “ಕೊರ್ನೆಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನೂ, ದೇವರಿಗೆ ಭಯಪಡುವವನೂ, ಯೆಹೂದ್ಯ ಜನರೆಲ್ಲರಿಂದ ಒಳ್ಳೆಯ ಹೆಸರು ಹೊಂದಿದವನೂ ಆಗಿದ್ದಾನೆ; ನಿನ್ನನ್ನು ತನ್ನ ಮನೆಗೆ ಆಹ್ವಾನಿಸಿ ನಿನ್ನಿಂದ ಸುವಾರ್ತೆಯನ್ನು ಕೇಳಬೇಕೆಂದು ಪರಿಶುದ್ಧ ದೇವದೂತನ ಮುಖಾಂತರವಾಗಿ ಅಪ್ಪಣೆ ಹೊಂದಿದ್ದಾನೆ” ಎಂದು ಹೇಳಿದರು.
Kannada BSI Bible 2016
ಅವರು--ಕೊರ್ನೇಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನೂ ದೇವರಿಗೆ ಭಯಪಡು ವವನೂ ಯೆಹೂದ್ಯ ಜನಾಂಗದವರೆಲ್ಲರಿಂದ ಒಳ್ಳೇ ಹೆಸರು ಹೊಂದಿದವನೂ ಆಗಿದ್ದಾನೆ; ನಿನ್ನನ್ನು ತನ್ನ ಮನೆಗೆ ಕರೇ ಕಳುಹಿಸಿಕೊಂಡು ನಿನ್ನ ಮಾತುಗಳನ್ನು ಕೇಳಬೇಕೆಂದು ಅವನು ಪರಿಶುದ್ಧ ದೂತ
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು - ಕೊರ್ನೇಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನೂ ದೇವರಿಗೆ ಭಯಪಡುವವನೂ ಯೆಹೂದ್ಯ ಜನರೆಲ್ಲರಿಂದ ಒಳ್ಳೇ ಹೆಸರು ಹೊಂದಿದವನೂ ಆಗಿದ್ದಾನೆ; ನಿನ್ನನ್ನು ತನ್ನ ಮನೆಗೆ ಕರೇಕಳುಹಿಸಿಕೊಂಡು ನಿನ್ನಿಂದ ಬೋಧನೆಯನ್ನು ಕೇಳಬೇಕೆಂದು ದೇವದೂತನ ಮುಖಾಂತರವಾಗಿ ಅಪ್ಪಣೆ ಹೊಂದಿದನು ಎಂದು ಹೇಳಿದರು.
Kannada Bible (KNCL) BSI 2016
“ಶತಾಧಿಪತಿ ಕೊರ್ನೇಲಿಯ ನಮ್ಮನ್ನು ಕಳುಹಿಸಿದರು. ಅವರೊಬ್ಬ ಸತ್ಪುರುಷರು, ದೈವಭಕ್ತರು, ಯೆಹೂದ್ಯ ಜನತೆಯಿಂದ ಗೌರವಾನ್ವಿತರು. ನಿಮ್ಮನ್ನು ತಮ್ಮ ಮನೆಗೆ ಆಹ್ವಾನಿಸಿ, ನೀವು ಹೇಳುವುದನ್ನು ಕೇಳಬೇಕೆಂದು ದೇವದೂತನಿಂದ ಆದೇಶಪಡೆದಿದ್ದಾರೆ,” ಎಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು, “ಕೊರ್ನೇಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನು, ದೇವರಿಗೆ ಭಯಪಡುವವನು, ಯೆಹೂದ್ಯ ಜನರೆಲ್ಲರೂ ಅವನನ್ನು ಗೌರವಿಸುತ್ತಾರೆ. ನೀನು ಹೇಳುವಂಥದ್ದನ್ನು ಕೇಳಲಿಕ್ಕಾಗಿ ನಿನ್ನನ್ನು ಅಲ್ಲಿಗೆ ಕರೆಯಿಸಬೇಕೆಂದು ಒಬ್ಬ ಪರಿಶುದ್ಧ ದೇವದೂತನಿಂದ ಆದೇಶಪಡೆದಿದ್ದಾನೆ,” ಎಂದರು.