Acts 13:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವನಿಗೆ, “ನೀನು ಸೈತಾನನ ಮಗ! ಪ್ರತಿಯೊಂದು ಒಳ್ಳೆಯದಕ್ಕೂ ನೀನು ಶತ್ರು! ನೀನು ದುಷ್ಟತಂತ್ರಗಳಿಂದಲೂ ಸುಳ್ಳುಗಳಿಂದಲೂ ತುಂಬಿದವನಾಗಿರುವೆ. ಪ್ರಭುವಿನ ಸತ್ಯಗಳನ್ನು ಸುಳ್ಳುಗಳನ್ನಾಗಿ ಪರಿವರ್ತಿಸಲು ನೀನು ಯಾವಾಗಲೂ ಪ್ರಯತ್ನಿಸುತ್ತಿರುವೆ!
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನನ್ನು ದೃಷ್ಟಿಸಿನೋಡಿ; “ಸೈತಾನನ ಮಗನೇ, ಮೋಸದಿಂದಲೂ, ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೇರವಾದ ಮಾರ್ಗಗಳನ್ನು ಡೊಂಕು ಮಾಡುವುದನ್ನು ಬಿಡುವುದಿಲ್ಲವೋ?
Kannada BSI Bible 2016
ಎಲ್ಲಾ ಮೋಸದಿಂದಲೂ ಎಲ್ಲಾ ಕೆಟ್ಟತನ ದಿಂದಲೂ ತುಂಬಿರುವವನೇ, ಸೈತಾನನ ಮಗನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೀಟಾದ ಮಾರ್ಗಗಳನ್ನು ಡೊಂಕು ಮಾಡುವದನ್ನು ಬಿಡುವದಿಲ್ಲವೋ?
Kannada BSI JV (ಕನ್ನಡ ಸತ್ಯವೇದವು J.V. (BSI))
ಎಲೋ, ಎಲ್ಲಾ ಮೋಸದಿಂದಲೂ ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಸೈತಾನನ ಮಗನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೀಟಾದ ಮಾರ್ಗಗಳನ್ನು ಡೊಂಕುಮಾಡುವದನ್ನು ಬಿಡುವದಿಲ್ಲವೋ?
Kannada Bible (KNCL) BSI 2016
“ಎಲವೋ ಪಿಶಾಚಿಕೋರನೇ, ಸರ್ವಸನ್ಮಾರ್ಗಕ್ಕೆ ಶತ್ರು ನೀನು; ಎಲ್ಲಾ ತಂತ್ರ ಕುತಂತ್ರಗಳು ನಿನ್ನಲ್ಲಿ ತುಂಬಿವೆ. ಪ್ರಭುವಿನ ಸನ್ಮಾರ್ಗಕ್ಕೆ ಅಡ್ಡಿ ಆತಂಕಗಳನ್ನು ಒಡ್ಡುತ್ತಿರುವೆಯಾ? ಇಗೋ, ಈಗ ಪ್ರಭುವಿನ ಶಾಪ ನಿನ್ನ ಮೇಲಿದೆ!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಎಲೈ ಸೈತಾನನ ಮಗನೇ, ನೀತಿಗೆಲ್ಲಾ ವೈರಿಯೇ, ನಿನ್ನಲ್ಲಿ ಎಲ್ಲಾ ತರದ ಮೋಸವೂ ಕುತಂತ್ರವೂ ತುಂಬಿವೆ. ಕರ್ತದೇವರ ಸನ್ಮಾರ್ಗಗಳಿಗೆ ಅಡ್ಡಿಯಾಗುವುದನ್ನು ನೀನೆಂದೂ ನಿಲ್ಲಿಸುವುದಿಲ್ಲವೋ?