Acts 13:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಗೋ, ಪ್ರಭುವು ಕೈ ಎತ್ತಿದ್ದಾನೆ. ನೀನು ಕುರಡನಾಗಿ ಸ್ವಲ್ಪಕಾಲದವರೆಗೆ ಏನನ್ನೂ ನೋಡಲಾರೆ; ಸೂರ್ಯನ ಬೆಳಕನ್ನು ಸಹ ಕಾಣಲಾರೆ” ಎಂದನು. ಆಗ ಎಲಿಮನಿಗೆ ಎಲ್ಲವೂ ಕತ್ತಲಾಯಿತು. ತನ್ನನ್ನು ಯಾರಾದರೂ ಕೈಹಿಡಿದು ನಡೆಸಲೆಂದು ಅವನು ತಡವರಿಸುತ್ತಾ ಸುತ್ತಮುತ್ತ ನಡೆದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಗೋ, ಕರ್ತನು ನಿನಗೆ ವಿರುದ್ಧವಾಗಿ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ನೋಡದೆ ಇರುವಿ” ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಕಣ್ಣು ಮೊಬ್ಬಾಗಿ ಕತ್ತಲೆ ಕವಿಯಿತು; ಅವನು ಕೈಹಿಡಿದು ಆಧಾರ ಕೊಡುವವರನ್ನು ಹುಡುಕುತ್ತಾ ತಿರುಗಾಡಿದನು.
Kannada BSI Bible 2016
ಇಗೋ, ಕರ್ತನು ನಿನ್ನ ಮೇಲೆ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ಕಾಣದೆ ಇರುವಿ ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಮೊಬ್ಬಾಗಿ ಕತ್ತಲೆ ಉಂಟಾಯಿತು; ಅವನು ಕೈ ಹಿಡಿದು ನಡಿಸುವವರನ್ನು ಹುಡುಕುತ್ತಾ ತಿರುಗಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಗೋ, ಕರ್ತನು ನಿನ್ನ ಮೇಲೆ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ಕಾಣದೆ ಇರುವಿ ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಕಣ್ಣು ಮೊಬ್ಬಾಗಿ ಕತ್ತಲೆ ಉಂಟಾಯಿತು; ಅವನು ಕೈಹಿಡಿಯುವವರನ್ನು ಹುಡುಕುತ್ತಾ ತಿರುಗಾಡಿದನು.
Kannada Bible (KNCL) BSI 2016
ನೀನು ಬೆಳಕನ್ನು ಕಾಣದೆ ಕೆಲವು ಕಾಲ ಕುರುಡನಾಗಿರುವೆ,” ಎಂದನು. ಆ ಕ್ಷಣವೇ ಎಲಿಮನ ಕಣ್ಣು ಮಬ್ಬಾಯಿತು; ಕತ್ತಲೆ ಕವಿದಂತಾಯಿತು; ಯಾರಾದರೂ ಕೈಹಿಡಿದು ನಡೆಸಲೆಂದು ಅವನು ತಡವರಿಸಲಾರಂಭಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಗೋ ಕರ್ತದೇವರ ಹಸ್ತ ನಿನಗೆ ವಿರೋಧವಾಗಿದೆ. ಈಗ ನೀನು ಕುರುಡನಾಗಿ, ಸ್ವಲ್ಪ ಕಾಲ ಸೂರ್ಯನ ಬೆಳಕನ್ನು ಕಾಣದೇ ಹೋಗುವೆ,” ಎಂದನು. ತಕ್ಷಣವೇ ಅವನ ಮೇಲೆ ಮಂಜು ಮುಸುಕಿ ಕತ್ತಲೆ ಆವರಿಸಿತು. ಅವನು ತಡವರಿಸುತ್ತಾ ತನ್ನನ್ನು ಯಾರಾದರೂ ಕೈಹಿಡಿದು ನಡೆಸುವರೋ ಎಂದು ಹುಡುಕಾಡಿದನು.