Acts 13:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇದನ್ನು ಕಂಡ ರಾಜ್ಯಪಾಲನು ಪ್ರಭುವನ್ನು ನಂಬಿಕೊಂಡನು. ಪ್ರಭುವಿನ ವಿಷಯವಾದ ಉಪದೇಶವನ್ನು ಕೇಳಿ ವಿಸ್ಮಿತನಾದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಧಿಪತಿಯು ಆ ಸಂಗತಿಯನ್ನು ನೋಡಿ ಕರ್ತನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ನಂಬುವವನಾದನು.
Kannada BSI Bible 2016
ಆಗ ಅಧಿಪತಿಯು ನಡೆದದ್ದನ್ನು ನೋಡಿ ಕರ್ತನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ನಂಬಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಧಿಪತಿಯು ಆ ಸಂಗತಿಯನ್ನು ನೋಡಿ ಕರ್ತನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ನಂಬುವವನಾದನು.
Kannada Bible (KNCL) BSI 2016
ನಡೆದುದನ್ನು ಕಂಡ ರಾಜ್ಯಪಾಲನು ಪ್ರಭುವನ್ನು ವಿಶ್ವಾಸಿಸಿದನು; ಅವರನ್ನು ಕುರಿತ ಬೋಧನೆಯನ್ನು ಕೇಳಿ ವಿಸ್ಮಿತನಾದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಂಭವಿಸಿದ್ದೆಲ್ಲವನ್ನೂ ರಾಜ್ಯಪಾಲನು ಕಂಡು, ಕರ್ತ ಯೇಸುವಿನ ವಿಷಯವಾಗಿದ್ದ ಬೋಧನೆಯ ಬಗ್ಗೆ ಆಶ್ಚರ್ಯಪಟ್ಟು ವಿಶ್ವಾಸವನ್ನಿಟ್ಟನು.