Acts 13:50 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಯೆಹೂದ್ಯರು ಕೆಲವು ಧಾರ್ಮಿಕ ಸ್ತ್ರೀಯರನ್ನೂ ನಗರದ ನಾಯಕರನ್ನೂ ಪ್ರಚೋಧಿಸಿ, ಪೌಲ ಬಾರ್ನಬರ ಮೇಲೆ ಅವರು ಕೋಪಗೊಳ್ಳುವಂತೆಯೂ ಅವರಿಗೆ ವಿರೋಧಿಗಳಾಗುವಂತೆಯೂ ಮಾಡಿ ಪೌಲ ಬಾರ್ನಬರನ್ನು ಪಟ್ಟಣದಿಂದ ಹೊರಗಟ್ಟಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಯೆಹೂದ್ಯರು ತಮ್ಮ ಮತಕ್ಕೆ ಸೇರಿದ್ದ ಭಕ್ತೆಯರಾದ ಕುಲೀನ ಸ್ತ್ರೀಯರನ್ನೂ, ಊರಿನ ಪ್ರಮುಖರನ್ನೂ, ಹುರಿದುಂಬಿಸಿ ಪೌಲ ಮತ್ತು ಬಾರ್ನಬರ ವಿರೋಧವಾಗಿ ಹಿಂಸೆಯನ್ನೆಬ್ಬಿಸಿ ಅವರನ್ನು ತಮ್ಮ ಪ್ರದೇಶದಿಂದ ಆಚೆಗೆ ಅಟ್ಟಿಬಿಟ್ಟರು.
Kannada BSI Bible 2016
ಆದರೆ ಭಕ್ತಿಯುಳ್ಳ ಮತ್ತು ಗೌರವವುಳ್ಳ ಸ್ತ್ರೀಯರನ್ನೂ ಪಟ್ಟಣದ ಪ್ರಮುಖರನ್ನೂ ಯೆಹೂದ್ಯರು ಪ್ರೇರಿಸಿ ಪೌಲ ಬಾರ್ನಬರಿಗೆ ವಿರೋಧವಾಗಿ ಹಿಂಸೆ ಯನ್ನೆಬ್ಬಿಸಿ ತಮ್ಮ ಮೇರೆಗಳಿಂದ ಅವರನ್ನು ಅಟ್ಟಿಬಿಟ್ಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಯೆಹೂದ್ಯರು ತಮ್ಮ ಮತಕ್ಕೆ ಸೇರಿದ್ದ ಕುಲೀನ ಸ್ತ್ರೀಯರನ್ನೂ ಊರಿನ ಪ್ರಮುಖರನ್ನೂ ಪ್ರೇರಿಸಿ ಪೌಲ ಬಾರ್ನಬರ ಮೇಲೆ ಹಿಂಸೆಯನ್ನು ಎಬ್ಬಿಸಿ ಅವರನ್ನು ತಮ್ಮ ಮೇರೆಯಿಂದ ಆಚೆಗೆ ಅಟ್ಟಿದರು.
Kannada Bible (KNCL) BSI 2016
ಯೆಹೂದ್ಯರಾದರೋ ದೇವಭಕ್ತೆಯರಾದ ಕುಲೀನ ಸ್ತ್ರೀಯರನ್ನೂ ಪಟ್ಟಣದ ಪ್ರಮುಖ ಜನರನ್ನೂ ಪ್ರಚೋದಿಸಿದರು: ಪೌಲ ಮತ್ತು ಬಾರ್ನಬರನ್ನು ಹಿಂಸಿಸುವಂತೆ ಹುರಿದುಂಬಿಸಿ, ಅವರನ್ನು ಆ ಪ್ರದೇಶದಿಂದ ಹೊರಗಟ್ಟಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಯೆಹೂದ್ಯರು, ಆರಾಧಕರಾಗಿದ್ದ ಮಾನ್ಯರಾದ ಸ್ತ್ರೀಯರನ್ನೂ ನಗರದ ಗಣ್ಯ ನಾಯಕರನ್ನೂ ಪ್ರೇರೇಪಿಸಿ, ಪೌಲ, ಬಾರ್ನಬರ ಮೇಲೆ ಹಿಂಸೆಯನ್ನು ಎಬ್ಬಿಸಿ ತಮ್ಮ ಪ್ರದೇಶದಿಂದ ಹೊರಗೋಡಿಸಿದರು.