Acts 13:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣ ಮಾಡುತ್ತಾ ಪಾಫೋಸ್ ಎಂಬ ಊರಿಗೆ ಹೋದರು. ಮಂತ್ರತಂತ್ರಗಳನ್ನು ಮಾಡುತ್ತಿದ್ದ ಒಬ್ಬ ಯೆಹೂದ್ಯನನ್ನು ಅವರು ಪಾಫೋಸಿನಲ್ಲಿ ಕಂಡರು. ಅವನ ಹೆಸರು ‘ಬಾರ್ ಯೇಸು.’ ಅವನೊಬ್ಬ ಸುಳ್ಳುಪ್ರವಾದಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ದ್ವೀಪದಲ್ಲೆಲ್ಲಾ ಸಂಚಾರಮಾಡಿ ಪಾಫೋಸ್ ಎಂಬ ಊರಿನ ತನಕ ಬಂದು ಅಲ್ಲಿ ಸುಳ್ಳುಪ್ರವಾದಿಯೂ, ಮಂತ್ರವಾದಿಯೂ ಆಗಿದ್ದ ‘ಬಾರ್‍ಯೇಸು’ ಎಂಬ ಒಬ್ಬ ಯೆಹೂದ್ಯ ಮನುಷ್ಯನನ್ನು ಕಂಡರು.
Kannada BSI Bible 2016
ಅವರು ದ್ವೀಪದ ಮಾರ್ಗವಾಗಿ ಪಾಫೋಸಿಗೆ ಬಂದು ಅಲ್ಲಿ ಒಬ್ಬ ಸುಳ್ಳು ಪ್ರವಾದಿಯೂ ಮಂತ್ರವಾದಿಯೂ ಆಗಿದ್ದ ಬಾರ್‌ಯೇಸು ಎಂಬ ಒಬ್ಬ ಯೆಹೂದ್ಯನನ್ನು ಕಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ದ್ವೀಪದಲ್ಲೆಲ್ಲಾ ಸಂಚಾರಮಾಡಿ ಪಾಫೋಸ್ ಎಂಬ ಊರಿನ ತನಕ ಬಂದು ಅಲ್ಲಿ ಸುಳ್ಳುಪ್ರವಾದಿಯೂ ಮಂತ್ರವಾದಿಯೂ ಆಗಿದ್ದ ಬಾರ್‍‍ಯೇಸು ಎಂಬ ಒಬ್ಬ ಯೆಹೂದ್ಯ ಮನುಷ್ಯನನ್ನು ಕಂಡರು.
Kannada Bible (KNCL) BSI 2016
ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣಮಾಡುತ್ತಾ ಪಾಫೊಸ್ ಎಂಬ ಊರಿಗೆ ಹೋದರು. ಅಲ್ಲಿ ‘ಬಾರ್‍ಯೇಸು’ ಎಂಬ ಮಂತ್ರವಾದಿಯನ್ನು ಕಂಡರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣಮಾಡಿ ಪಾಫೋಸ್ ಎಂಬಲ್ಲಿಗೆ ಬಂದರು. ಅಲ್ಲಿ ಮಂತ್ರವಾದಿಯೂ ಸುಳ್ಳುಪ್ರವಾದಿಯೂ ಆಗಿದ್ದ “ಬಾರ್ ಯೇಸು” ಎಂಬ ಹೆಸರಿನ ಒಬ್ಬ ಯೆಹೂದ್ಯನನ್ನು ಕಂಡರು.