Acts 14:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜೆಯುಸ್‌ನ ಗುಡಿಯು ಪಟ್ಟಣದ ಸಮೀಪದಲ್ಲಿತ್ತು. ಈ ಗುಡಿಯ ಅರ್ಚಕನು ಕೆಲವು ಹೋರಿಗಳನ್ನು ಮತ್ತು ಹೂವುಗಳನ್ನು ಪಟ್ಟಣದ ಬಾಗಿಲಿನ ಬಳಿಗೆ ತೆಗೆದುಕೊಂಡು ಬಂದನು. ಆ ಅರ್ಚಕನು ಮತ್ತು ಜನರು ಪೌಲ ಬಾರ್ನಬರಿಗೆ ಬಲಿಕೊಟ್ಟು ಅವರನ್ನು ಆರಾಧಿಸಬೇಕೆಂದಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಊರ ಮುಂದಿದ್ದ ದ್ಯೌಸ್ ದೇವರ ಗುಡಿಯ ಪೂಜಾರಿಯು ಎತ್ತುಗಳನ್ನೂ, ಹೂವಿನ ಹಾರಗಳನ್ನೂ ಊರಬಾಗಿಲಿನ ಹತ್ತಿರಕ್ಕೆ ತಂದು ಜನರೊಂದಿಗೆ ಅವರಿಗೆ ಬಲಿಕೊಡಬೇಕೆಂದಿದ್ದನು.
Kannada BSI Bible 2016
ಆಗ ಅವರ ಪಟ್ಟಣದ ಎದುರಿನಲ್ಲಿದ್ದ ೃಹಸ್ಪತಿಯ ಯಾಜಕನು ಎತ್ತುಗಳನ್ನೂ ಹೂವಿನಹಾರಗಳನ್ನೂ ದ್ವಾರಗಳ ಬಳಿಗೆ ತಂದು ಜನರೊಂದಿಗೆ ಬಲಿಯನ್ನು ಅರ್ಪಿಸಬೇಕೆಂದಿದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಊರ ಮುಂದಿದ್ದ ದ್ಯೌಸ್‍ದೇವರ ದೇವಸ್ಥಾನದ ಪೂಜಾರಿಯು ಎತ್ತುಗಳನ್ನೂ ಹೂವಿನ ಹಾರಗಳನ್ನೂ ಊರ ಬಾಗಿಲಿನ ಹತ್ತರಕ್ಕೆ ತಂದು ಜನರೊಂದಿಗೆ ಅವರಿಗೆ ಬಲಿಕೊಡಬೇಕೆಂದಿದ್ದನು.
Kannada Bible (KNCL) BSI 2016
ಆ ಜೆಯುಸ್ ದೇವರ ಗುಡಿ ಪಟ್ಟಣದ ಮುಂದೆಯೇ ಇತ್ತು. ಅಲ್ಲಿಯ ಅರ್ಚಕನು ದ್ವಾರದ ಬಳಿಗೆ ಹೋರಿಗಳನ್ನೂ ಹೂವಿನ ಹಾರಗಳನ್ನೂ ತೆಗೆದುಕೊಂಡು ಬಂದನು. ಜನರೊಡನೆ ಸೇರಿ ಪ್ರೇಷಿತರಿಗೆ ಬಲಿಯನ್ನು ಅರ್ಪಿಸಬೇಕೆಂದಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪಟ್ಟಣದ ಹೊರಗೆ ಸಮೀಪದಲ್ಲಿದ್ದ ಜೆಯುಸ್ ದೇವರ ಗುಡಿಯ ಪೂಜಾರಿಯು, ಪಟ್ಟಣದ ದ್ವಾರಗಳ ಬಳಿಗೆ ಹೋರಿಗಳನ್ನೂ ಹೂಮಾಲೆಗಳನ್ನೂ ತೆಗೆದುಕೊಂಡು ಬರಲು, ಅವರಿಗಾಗಿ ಯಜ್ಞಗಳನ್ನು ಅರ್ಪಿಸಲು ಜನರು ಅಪೇಕ್ಷಿಸಿದರು.