Acts 17:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪೌಲನೊಂದಿಗೆ ಹೋದ ವಿಶ್ವಾಸಿಗಳು ಅವನನ್ನು ಅಥೆನ್ಸ್ ಪಟ್ಟಣಕ್ಕೆ ಕರೆದುಕೊಂಡು ಹೋದರು. ಈ ಸಹೋದರರು ಪೌಲನಿಂದ ಸೀಲ ತಿಮೊಥೆಯರಿಗೆ ಒಂದು ಸಂದೇಶವನ್ನು ತೆಗೆದುಕೊಂಡು ಹಿಂತಿರುಗಿ ಬಂದರು. “ಸಾಧ್ಯವಾದಷ್ಟು ಬೇಗನೆ ನನ್ನ ಬಳಿಗೆ ಬನ್ನಿರಿ” ಎಂಬುದೇ ಆ ಸಂದೇಶ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪೌಲನನ್ನು ಕಳುಹಿಸಿದವರು ಅವನನ್ನು ಅಥೇನೆಯವರೆಗೂ ಕರೆದುಕೊಂಡು ಹೋದರು, ಸೀಲನನ್ನೂ, ತಿಮೊಥೆಯನನ್ನೂ ಭೇಟಿಯಾದ ಕೂಡಲೆ ಬೇಗ ತನ್ನ ಬಳಿಗೆ ಬರಬೇಕೆಂಬ ಅಪ್ಪಣೆಯನ್ನು ಪೌಲನಿಂದ ಹೊಂದಿ ಹೊರಟುಬಂದರು.
Kannada BSI Bible 2016
ಪೌಲನನ್ನು ಸಾಗಕಳುಹಿಸಿದವರು ಅವನನ್ನು ಅಥೇನೆಯವರೆಗೂ ಕರೆದುಕೊಂಡು ಹೋಗಿ ಸೀಲ ನನ್ನೂ ತಿಮೊಥೆಯನನ್ನೂ ಬೇಗ ತನ್ನ ಬಳಿಗೆ ಬರ ಬೇಕೆಂಬ ಅಪ್ಪಣೆಯನ್ನು ಅವನಿಂದ ಹೊಂದಿ ಹೊರಟುಹೋದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಪೌಲನನ್ನು ಸಾಗಕಳುಹಿಸಿದವರು ಅವನನ್ನು ಅಥೇನೆಯವರೆಗೂ ಕರೆದುಕೊಂಡುಹೋಗಿ - ಸೀಲನನ್ನೂ ತಿಮೊಥೆಯನನ್ನೂ ಕೂಡಿದ ಮಟ್ಟಿಗೆ ಬೇಗ ನನ್ನ ಬಳಿಗೆ ಬರಹೇಳಿರಿ ಎಂಬ ಅಪ್ಪಣೆಯನ್ನು ಅವನಿಂದ ಹೊಂದಿ ಹೊರಟುಬಂದರು.
Kannada Bible (KNCL) BSI 2016
ಪೌಲನನ್ನು ಬಿಟ್ಟುಬರಲು ಹೋದವರು ಅವನ ಜೊತೆ ಅಥೆನ್ಸಿನವರೆಗೆ ಹೋದರು; ಅನಂತರ ಸೀಲ ಮತ್ತು ತಿಮೊಥೇಯರಿಬ್ಬರೂ ಸಾಧ್ಯವಾದಷ್ಟು ಬೇಗ ತನ್ನ ಬಳಿಗೆ ಬಂದುಸೇರಬೇಕೆಂಬ ಆಜ್ಞೆಯನ್ನು ಪೌಲನಿಂದ ಪಡೆದು, ಅವರು ಬೆರೋಯಕ್ಕೆ ಹಿಂದಿರುಗಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪೌಲನನ್ನು ಬಿಟ್ಟು ಬರಲು ಹೋದವರು ಅವನ ಜೊತೆ ಅಥೇನೆ ಪಟ್ಟಣದವರೆಗೆ ಹೋದರು. ಸೀಲ ಮತ್ತು ತಿಮೊಥೆಯರು ಸಾಧ್ಯವಾದಷ್ಟು ಬೇಗನೇ ತನ್ನ ಬಳಿ ಬರಬೇಕೆಂಬ ಅಪ್ಪಣೆಯನ್ನು ಪೌಲನಿಂದ ಪಡೆದು, ಅವರು ಬೆರೋಯಕ್ಕೆ ಹಿಂತಿರುಗಿ ಹೋದರು.