Acts 18:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪೌಲನು ಅವರಿಗೆ, “ದೇವರು ಬಯಸುವುದಾದರೆ, ನಾನು ನಿಮ್ಮ ಬಳಿಗೆ ಮತ್ತೆ ಬರುತ್ತೇನೆ” ಎಂದು ಹೇಳಿ ಅಲ್ಲಿಂದ ಹೊರಟನು. ಹೀಗೆ ಪೌಲನು ಎಫೆಸದಿಂದ ನೌಕಾಯಾನ ಮಾಡಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ದೇವರ ಚಿತ್ತವಾದರೆ ಪುನಃ ನಿಮ್ಮ ಬಳಿಗೆ ಬರುತ್ತೇನೆಂದು” ಹೇಳಿ ಅವರ ಅಪ್ಪಣೆ ತೆಗೆದುಕೊಂಡು ಹೊರಟುಹೋದನು. ಅನಂತರ ಎಫೆಸದಿಂದ ಸಮುದ್ರಪ್ರಯಾಣ ಮಾಡಿ ಕೈಸರೈಯದಲ್ಲಿ ಇಳಿದು,
Kannada BSI Bible 2016
ಯೆರೂಸಲೇಮಿನಲ್ಲಿ ಬರುವ ಈ ಹಬ್ಬಕ್ಕೆ ನಾನು ಹೇಗಾದರೂ ಅಲ್ಲಿ ಇರತಕ್ಕದ್ದು; ದೇವರ ಚಿತ್ತವಾದರೆ ನಾನು ಹಿಂದಿರುಗಿ ನಿಮ್ಮ ಬಳಿಗೆ ಬರುತ್ತೇನೆ ಎಂದು ಹೇಳಿ ಅವರ ಅಪ್ಪಣೆ ತಕ್ಕೊಂಡು ಎಫೆಸದಿಂದ ಸಮುದ್ರ ಪ್ರಯಾಣಮಾಡಿ ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವರ ಚಿತ್ತವಾದರೆ ತಿರಿಗಿ ನಿಮ್ಮ ಬಳಿಗೆ ಬರುತ್ತೇನೆಂದು ಹೇಳಿ ಅವರ ಅಪ್ಪಣೆ ತೆಗೆದುಕೊಂಡು ಹೋದನು. ಆಮೇಲೆ ಎಫೆಸದಿಂದ ಸಮುದ್ರಪ್ರಯಾಣ ಮಾಡಿ
Kannada Bible (KNCL) BSI 2016
ಅವರನ್ನು ಬೀಳ್ಕೊಡುತ್ತಾ, “ದೇವರ ಚಿತ್ತವಾದರೆ ನಾನು ನಿಮ್ಮಲ್ಲಿಗೆ ಮರಳಿ ಬರುತ್ತೇನೆ,” ಎಂದು ಹೇಳಿ ಎಫೆಸದಿಂದ ಸಮುದ್ರ ಪ್ರಯಾಣಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅವನು ಅಲ್ಲಿಂದ ಹೊರಟು ಹೋಗಲಿಕ್ಕಿದ್ದಾಗ, “ದೇವರ ಚಿತ್ತವಾದರೆ, ನಾನು ಹಿಂದಿರುಗಿ ಬರುವೆ,” ಎಂದನು. ಆಮೇಲೆ ಎಫೆಸದಿಂದ ನೌಕೆಯಲ್ಲಿ ಪ್ರಯಾಣಮಾಡಿದನು.