Acts 19:34 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಅಲೆಕ್ಸಾಂಡರನು ಯೆಹೂದ್ಯನೆಂದು ತಿಳಿದಾಗ ಜನರೆಲ್ಲರು, “ಎಫೆಸದ ಅರ್ತೆಮಿಯು ಮಹಾದೇವಿ! ಎಫೆಸದ ಅರ್ತೆಮಿಯು ಮಹಾದೇವಿ! ಅರ್ತೆಮಿಯು ಮಹಾದೇವಿ…!” ಎಂದು ಒಂದೇಸಮನೆ ಎರಡು ತಾಸುಗಳವರೆಗೆ ಕೂಗಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಅವನು ಯೆಹೂದ್ಯನೆಂದು ತಿಳಿದಾಗ ಎಲ್ಲರೂ ಒಂದೇ ಶಬ್ದದಿಂದ; “ಎಫೆಸದವರ ಅರ್ತೆಮೀದೇವಿ ಮಹಾದೇವಿ” ಎಂದು ಎರಡು ಘಂಟೆ ಹೊತ್ತು ಕೂಗಿದರು.
Kannada BSI Bible 2016
ಆದರೆ ಅವನು ಯೆಹೂದ್ಯನೆಂದು ತಿಳಿದಾಗ ಎಲ್ಲರೂ ಒಂದೇ ಶಬ್ದದಿಂದ--ಎಫೆಸದವರ ಡಯಾನಿ ದೊಡ್ಡವಳು ಎಂದು ಹೆಚ್ಚು ಕಡಿಮೆ ಎರಡು ಘಂಟೆ ಹೊತ್ತು ಕೂಗಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಅವನು ಯೆಹೂದ್ಯನೆಂದು ತಿಳಿದಾಗ ಎಲ್ಲರೂ ಒಂದೇ ಶಬ್ದದಿಂದ - ಎಫೆಸದವರ ಅರ್ತೆಮೀದೇವಿ ಮಹಾದೇವಿ ಎಂದು ಎರಡು ಗಂಟೆ ಹೊತ್ತು ಕೂಗಿದರು.
Kannada Bible (KNCL) BSI 2016
ಆದರೆ ಅವನು ಯೆಹೂದ್ಯನೆಂದು ಗುರುತಿಸಿದ ಕೂಡಲೇ, ಅವರೆಲ್ಲರೂ ಎರಡು ಗಂಟೆಗಳ ಕಾಲ, “ಎಫೆಸದ ಅರ್ತೆಮೀ ದೇವಿಯೇ ಮಹಾದೇವಿ,” ಎಂದು ಒಂದೇ ಸಮನೆ ಬೊಬ್ಬೆಹಾಕಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅವನು ಯೆಹೂದ್ಯನೆಂದು ಜನರು ತಿಳಿದಾಗ, “ಎಫೆಸದ ಅರ್ತೆಮೀ ದೇವಿ ಮಹಾದೇವಿ!” ಎಂದು ಒಕ್ಕೊರಲಿನಿಂದ ಎರಡು ತಾಸುಗಳವರೆಗೆ ಆರ್ಭಟಿಸುತ್ತಲೇ ಇದ್ದರು.