Acts 19:35 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಳಿಕ ಪಟ್ಟಣದ ಅಧಿಕಾರಿಯು ಜನಸಮೂಹವನ್ನು ಶಾಂತಗೊಳಿಸಿ ಅವರಿಗೆ, “ಎಫೆಸದ ಜನರೇ, ಮಹಾದೇವತೆಯಾದ ಅರ್ತೆಮಿ ದೇವಿಯ ಗುಡಿಯನ್ನು ಎಫೆಸ ಪಟ್ಟಣವು ಕಾಪಾಡಿಕೊಂಡು ಬಂದಿರುವುದು ಜನರೆಲ್ಲರಿಗೆ ತಿಳಿದಿದೆ. ಆಕೆಯು ಪವಿತ್ರ ಕಲ್ಲನ್ನು ಸಹ ನಾವು ಕಾಪಾಡಿಕೊಂಡು ಬಂದಿರುವುದು ಜನರೆಲ್ಲರಿಗೆ ಗೊತ್ತಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೊನೆಗೆ ಪಟ್ಟಣದ ಯಜಮಾನನು ಜನರ ಗುಂಪನ್ನು ಸಮಾಧಾನಪಡಿಸಿ; “ಎಫೆಸದವರೇ, ಎಫೆಸ ಪಟ್ಟಣದವರು ಅರ್ತೆಮೀ ಮಹಾದೇವಿಯ ದೇವಸ್ಥಾನಕ್ಕೂ, ಆಕಾಶದಿಂದ ಬಿದ್ದ ಆಕೆಯ ಮೂರ್ತಿಗೂ, ಪಾಲಕರಾಗಿದ್ದಾರೆಂಬುದನ್ನು ತಿಳಿಯದಿರುವ ಮನುಷ್ಯನು ಯಾವನಿದ್ದಾನೇ?
Kannada BSI Bible 2016
ಆಗ ಪುರಸಭೆಯ ಕಾರ್ಯದರ್ಶಿಯು ಜನರನ್ನು ಸಮಾಧಾನಪಡಿಸಿ ಹೇಳಿದ್ದೇನಂದರೆ--ಎಫೆಸದ ಜನರೇ, ಎಫೆಸದವರ ಈ ಪಟ್ಟಣವು ಮಹಾದೇವತೆಯಾದ ಡಯಾನಿಯನ್ನೂ ಬೃಹಸ್ಪತಿಯಿಂದ ಕೆಳಗೆ ಬಿದ್ದ ಪ್ರತಿಮೆಯನ್ನೂ ಹೇಗೆ ಆರಾದ್ಧಿಸುವದೆಂದು ತಿಳಿಯದ ಮನುಷ್ಯನು ಯಾವನು?
Kannada BSI JV (ಕನ್ನಡ ಸತ್ಯವೇದವು J.V. (BSI))
ಕಡೆಗೆ ಪಟ್ಟಣದ ಯಜಮಾನನು ಜನರ ಗುಂಪನ್ನು ಸಮಾಧಾನಪಡಿಸಿ - ಎಫೆಸದವರೇ, ಎಫೆಸ ಪಟ್ಟಣದವರು ಅರ್ತೆಮೀ ಮಹಾದೇವಿಯ ದೇವಸ್ಥಾನಕ್ಕೂ ಆಕಾಶದಿಂದ ಬಿದ್ದ ಆಕೆಯ ಮೂರ್ತಿಗೂ ಪಾಲಕರಾಗಿದ್ದಾರೆಂಬದನ್ನು ತಿಳಿಯದಿರುವ ಮನುಷ್ಯನು ಇದ್ದಾನೇ?
Kannada Bible (KNCL) BSI 2016
ಕಟ್ಟಕಡೆಗೆ ಪಟ್ಟಣದ ಅಧಿಕಾರಿ ಒಬ್ಬನು ಜನಸಮೂಹವನ್ನು ಶಾಂತಗೊಳಿಸುತ್ತಾ ಹೀಗೆಂದನು: “ಎಫೆಸದ ಮಹಾಜನರೇ, ಅರ್ತೆಮೀ ಮಹಾದೇವಿಯ ಗುಡಿಯನ್ನು ಹಾಗೂ ಆಕಾಶದಿಂದ ಬಿದ್ದ ಶಿಲೆಯನ್ನು ಎಫೆಸ ಪಟ್ಟಣವು ಎಚ್ಚರಿಕೆಯಿಂದ ಸಂರಕ್ಷಿಸುತ್ತಾ ಬಂದಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಗರದ ಗುಮಾಸ್ತ ಜನಸಮೂಹವನ್ನು ಸುಮ್ಮನಿರಿಸಿ, “ಎಫೆಸದ ಜನರೇ, ಮಹಾ ಅರ್ತೆಮೀ ದೇವಿಯ ಮಂದಿರ ಹಾಗೂ ಆಕಾಶದಿಂದ ಬಿದ್ದ ಆಕೆಯ ಮೂರ್ತಿಯನ್ನು ಎಫೆಸ ಪಟ್ಟಣವು ಕಾಪಾಡುತ್ತಿದೆ ಎಂಬುದನ್ನು ತಿಳಿಯದಿರುವ ಮನುಷ್ಯನು ಇದ್ದಾನೆಯೇ?