Acts 2:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜನರೆಲ್ಲರೂ ವಿಸ್ಮಯಗೊಂಡರು ಮತ್ತು ಗಲಿಬಿಲಿಯಾದರು. ಅವರು, “ಏನು ನಡೆಯುತ್ತಿದೆ?” ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎಲ್ಲರೂ ಬೆರಗಾಗಿ ಕಳವಳಗೊಂಡು, “ಇದೇನಾಗಿರಬಹುದು ಎಂದು ಒಬ್ಬರನ್ನೊಬ್ಬರು ಕೇಳುತ್ತಿದ್ದರು?”
Kannada BSI Bible 2016
ಅವರೆ ಲ್ಲರೂ ವಿಸ್ಮಯಗೊಂಡು ಸಂದೇಹಪಟ್ಟವರಾಗಿ-- ಇದರ ಅರ್ಥವೇನು ಎಂದು ಒಬ್ಬರನ್ನೊಬ್ಬರು ಕೇಳುವವರಾದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಎಲ್ಲರೂ ಬೆರಗಾಗಿ ಕಳವಳಗೊಂಡು - ಇದೇನಾಗಿರಬಹುದು ಎಂದು ಒಬ್ಬರನ್ನೊಬ್ಬರು ಕೇಳುತ್ತಿದ್ದರು.
Kannada Bible (KNCL) BSI 2016
ಸರ್ವರೂ ಭ್ರಮೆಗೊಂಡು, ಇದರ ಅರ್ಥವಾದರೂ ಏನೆಂದು ಒಬ್ಬರನ್ನು ಒಬ್ಬರು ವಿಸ್ಮಯದಿಂದ ವಿಚಾರಿಸತೊಡಗಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಆಶ್ಚರ್ಯದಿಂದಲೂ ಗಲಿಬಿಲಿಗೊಂಡವರಾಗಿಯೂ, “ಇದರ ಅರ್ಥವೇನು?” ಎಂದು ತಮ್ಮತಮ್ಮೊಳಗೆ ಪ್ರಶ್ನೆಮಾಡಿಕೊಂಡರು.