Acts 20:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾವು ಪೌಲನಿಗಿಂತ ಮುಂಚಿತವಾಗಿಯೇ ಅಸ್ಸೊಸಿ ಎಂಬ ಪಟ್ಟಣಕ್ಕೆ ನೌಕಾಯಾನ ಮಾಡಿದೆವು. ತಾನು ಭೂಮಾರ್ಗವಾಗಿ ಬರುವುದಾಗಿಯೂ ಅಸ್ಸೊಸಿನಲ್ಲಿ ನಮ್ಮನ್ನು ಸಂಧಿಸಿ ಅಲ್ಲಿಂದ ನಮ್ಮೊಂದಿಗೆ ಹಡಗಿನಲ್ಲಿ ಪ್ರಯಾಣ ಮಾಡುವುದಾಗಿಯೂ ಪೌಲನು ನಮಗೆ ತಿಳಿಸಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾವು ಮೊದಲೇ ಅಲ್ಲಿಗೆ ಹೋಗಿ ಅಸ್ಸೊಸಿನಲ್ಲಿ ಪೌಲನನ್ನು ತಮ್ಮೊಂದಿಗೆ ಹತ್ತಿಸಿಕೊಳ್ಳಬೇಕೆಂದು ಸಮುದ್ರ ಪ್ರಯಾಣಮಾಡಿದೆವು. ಪೌಲನು ಹಾಗೆಯೇ ನಮಗೆ ಅಪ್ಪಣೆ ಮಾಡಿ ತಾನು ಕಾಲುನಡಿಗೆಯಾಗಿ ಹೋಗಬೇಕೆಂದು ಮನಸ್ಸು ಮಾಡಿದ್ದನು.
Kannada BSI Bible 2016
ನಾವು ಮೊದಲು ಹೋಗಿ ಅಸ್ಸೊಸಿನಲ್ಲಿ ಪೌಲ ನನ್ನು ಹತ್ತಿಸಿಕೊಳ್ಳಬೇಕೆಂದು ಅಲ್ಲಿಗೆ ಸಮುದ್ರ ಪ್ರಯಾಣ ಮಾಡಿದೆವು. ಪೌಲನು ಹಾಗೆಯೇ ನಮಗೆ ಅಪ್ಪಣೆಮಾಡಿ ತಾನು ಕಾಲು ನಡೆಯಾಗಿ ಹೋಗಬೇಕೆಂದು ಮನಸ್ಸು ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾವು ಮೊದಲು ಹೋಗಿ ಅಸ್ಸೊಸಿನಲ್ಲಿ ಪೌಲನನ್ನು ಹತ್ತಿಸಿಕೊಳ್ಳಬೇಕೆಂದು ಅಲ್ಲಿಗೆ ಸಮುದ್ರಪ್ರಯಾಣ ಮಾಡಿದೆವು. ಪೌಲನು ತಾನು ಕಾಲುನಡೆಯಾಗಿ ಹೋಗಬೇಕೆಂದು ಹಾಗೆಯೇ ನಮಗೆ ಅಪ್ಪಣೆ ಮಾಡಿದ್ದನು.
Kannada Bible (KNCL) BSI 2016
ಪೌಲನು ನಮಗಿತ್ತ ಸೂಚನೆಯ ಪ್ರಕಾರ ನಾವು ಹಡಗುಹತ್ತಿ ಅಸ್ಸೊಸಿ ಎಂಬ ಊರಿಗೆ ಮುಂಚಿತವಾಗಿ ಪ್ರಯಾಣಮಾಡಿದೆವು. ತಾನು ಅಲ್ಲಿಗೆ ಭೂಮಾರ್ಗವಾಗಿ ಬರುವುದಾಗಿಯೂ ಅಲ್ಲಿ ತನ್ನನ್ನು ಹಡಗಿಗೆ ಏರಿಸಿಕೊಳ್ಳಬೇಕೆಂದೂ ಪೌಲನು ತಿಳಿಸಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೊದಲು ನಾವು ನೌಕೆ ಇದ್ದ ಸ್ಥಳಕ್ಕೆ ಹೋಗಿ ಅಸ್ಸೊಸಿ ಎಂಬಲ್ಲಿಗೆ ಸಮುದ್ರ ಪ್ರಯಾಣಮಾಡಿದೆವು. ಅಲ್ಲಿ ಪೌಲನು ಬಂದು ನಮ್ಮೊಂದಿಗೆ ನೌಕೆಯಲ್ಲಿ ಪ್ರಯಾಣ ಮಾಡಬೇಕಿತ್ತು. ಅಲ್ಲಿಗೆ ಕಾಲ್ನಡಿಗೆಯಾಗಿ ಹೋಗಬೇಕಾದ್ದರಿಂದ ಅವನು ಈ ಏರ್ಪಾಡು ಮಾಡಿದನು.