Acts 20:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮರುದಿನ ನಾವು ಅಲ್ಲಿಂದ ನೌಕಾಯಾನ ಮಾಡಿ ಖಿಯೋಸ್ ದ್ವೀಪದ ಸಮೀಪದಲ್ಲಿದ್ದ ಸ್ಥಳವೊಂದಕ್ಕೆ ಬಂದೆವು. ಮರುದಿನ ಸಾಮೋಸ್ ದ್ವೀಪಕ್ಕೆ ನೌಕಾಯಾನ ಮಾಡಿದೆವು. ಅದರ ಮೂರನೆಯ ದಿನ ನಾವು ಮಿಲೇತ ಪಟ್ಟಣಕ್ಕೆ ಬಂದೆವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಲ್ಲಿಂದ ಹೊರಟು ಮರುದಿನ ಖೀಯೊಸ್‍ ದ್ವೀಪಕ್ಕೆ ಎದುರಾಗಿ ಬಂದು ಅದರ ಮರುದಿನ ಸಾಮೊಸಿನ ಹತ್ತಿರ ಬಂದೆವು. ಮರುದಿನ ಮಿಲೇತಕ್ಕೆ ಸೇರಿದೆವು.
Kannada BSI Bible 2016
ಅಲ್ಲಿಂದ ಹೊರಟು ಮರುದಿನ ಖೀಯೊಸ್‌ ದ್ವೀಪಕ್ಕೆದುರಾಗಿ ಬಂದು ಅದರ ಮರುದಿನ ಸಾಮೊಸಿಗೆ ಬಂದು ತ್ರೋಗುಲ್ಯದಲ್ಲಿ ಇದ್ದು ಅದರ ಮರುದಿನ ನಾವು ಮಿಲೇತಕ್ಕೆ ಸೇರಿದೆವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಲ್ಲಿಂದ ಹೊರಟು ಮರುದಿನ ಖೀಯೊಸ್‍ ದ್ವೀಪಕ್ಕೆದುರಾಗಿ ಬಂದು ಅದರ ಮರುದಿನ ಸಾಮೊಸಿನ ಹತ್ತರ ಬಂದೆವು. ಅದರ ಮರುದಿನ ವಿುಲೇತಕ್ಕೆ ಸೇರಿದೆವು.
Kannada Bible (KNCL) BSI 2016
ಅಲ್ಲಿಂದ ನೌಕಾಯಾನ ಮಾಡಿ ಮರುದಿನ ಖಿಯೋಸ ದ್ವೀಪವನ್ನು ಸಮೀಪಿಸಿ ಮಾರನೆಯ ದಿನ ಸಾಮೋಸನ್ನು ತಲುಪಿದೆವು. ಅದರ ಮಾರನೆಯ ದಿನ ಮಿಲೇತನ್ನು ಸೇರಿದೆವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾವು ಮರುದಿನ ಅಲ್ಲಿಂದ ಪ್ರಯಾಣ ಮುಂದುವರೆಸಿ ಖೀಯೊಸ್ ದ್ವೀಪವನ್ನು ಸಮೀಪಿಸಿದೆವು. ಮರುದಿನ ಸಾಮೊಸನ್ನು ತಲುಪಿದೆವು. ಅನಂತರ ಮಾರನೆಯ ದಿನ ಮಿಲೇತನ್ನು ಸೇರಿದೆವು.