Acts 20:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಲ್ಲಿ ಅವನು ಮೂರು ತಿಂಗಳವರೆಗೆ ಇದ್ದನು. ಅವನು ಸಿರಿಯಕ್ಕೆ ನೌಕಾಯಾನ ಮಾಡಲು ಸಿದ್ಧನಾಗಿದ್ದನು. ಆದರೆ ಕೆಲವು ಯೆಹೂದ್ಯರು ಅವನಿಗೆ ವಿರೋಧವಾಗಿ ಯೋಜನೆ ಮಾಡಿದರು. ಆದ್ದರಿಂದ ಪೌಲನು ಸಿರಿಯಕ್ಕೆ ಮಕೆದೋನಿಯದ ಮೂಲಕ ಹಿಂತಿರುಗಿ ಹೋಗಲು ನಿರ್ಧರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಲ್ಲಿ ಮೂರು ತಿಂಗಳು ಕಳೆದ ನಂತರ ಸಿರಿಯ ದೇಶಕ್ಕೆ ಸಮುದ್ರಮಾರ್ಗವಾಗಿ ಹೋಗಬೇಕೆಂದಿದ್ದಾಗ ಅವನಿಗೆ ವಿರುದ್ಧವಾಗಿ ಯೆಹೂದ್ಯರು ಒಳಸಂಚುಮಾಡಿದ್ದು ಅವನಿಗೆ ತಿಳಿದು ಬಂದ್ದುದರಿಂದ ಅವನು ಮಕೆದೋನ್ಯದ ಮಾರ್ಗವಾಗಿ ಹಿಂತಿರುಗಿ ಹೋಗುವುದಕ್ಕೆ ತೀರ್ಮಾನಿಸಿದನು.
Kannada BSI Bible 2016
ಅಲ್ಲಿ ಮೂರು ತಿಂಗಳು ಇದ್ದ ಮೇಲೆ ಸಮುದ್ರ ಮಾರ್ಗವಾಗಿ ಸಿರಿಯಾಕ್ಕೆ ಹೋಗಬೇಕೆಂದಿದ್ದಾಗ ಯೆಹೂದ್ಯರು ಅವನಿಗಾಗಿ ಹೊಂಚುಹಾಕಿದ್ದರಿಂದ ಅವನು ಮಕೆದೋನ್ಯದ ಮುಖಾಂತರ ಹಿಂತಿರುಗಿ ಹೋಗು ವದಕ್ಕೆ ತೀರ್ಮಾನಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಲ್ಲಿ ಮೂರು ತಿಂಗಳು ಕಳೆದ ಮೇಲೆ ಸಿರಿಯ ದೇಶಕ್ಕೆ ಸಮುದ್ರಮಾರ್ಗವಾಗಿ ಹೋಗಬೇಕೆಂದಿದ್ದಾಗ ಅವನಿಗೆ ವಿರುದ್ಧವಾಗಿ ಯೆಹೂದ್ಯರಲ್ಲಿ ಒಳಸಂಚು ಹುಟ್ಟಿದ್ದರಿಂದ ಅವನು ಮಕೆದೋನ್ಯದ ಮೇಲೆ ಹಿಂತಿರುಗಿ ಹೋಗುವದಕ್ಕೆ ತೀರ್ಮಾನಮಾಡಿದನು.
Kannada Bible (KNCL) BSI 2016
ಇಲ್ಲಿ ಅವನು ಮೂರು ತಿಂಗಳು ಕಳೆದನು. ಬಳಿಕ ಸಿರಿಯಕ್ಕೆ ನೌಕಾಯಾನ ಮಾಡಲು ಸಿದ್ಧನಾಗುತ್ತಿದ್ದಾಗ, ಯೆಹೂದ್ಯರು ಅವನ ವಿರುದ್ಧ ಒಳಸಂಚು ಮಾಡುತ್ತಿರುವುದಾಗಿ ತಿಳಿದುಬಂದಿತು. ಆದುದರಿಂದ ಅವನು ಮಕೆದೋನಿಯದ ಮಾರ್ಗವಾಗಿ ಹಿಂದಿರುಗಲು ನಿರ್ಧರಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಲ್ಲಿ ಮೂರು ತಿಂಗಳುಗಳ ಕಾಲ ಇದ್ದ ಮೇಲೆ, ಅವನು ಸಿರಿಯಕ್ಕೆ ಪ್ರಯಾಣ ಮಾಡಬೇಕೆಂದು ಯೋಚಿಸುತ್ತಿದ್ದಾಗ ಅವನಿಗೆ ವಿರೋಧವಾಗಿ ಯೆಹೂದ್ಯರು ಒಳಸಂಚು ಮಾಡಿದ್ದು ಅವನಿಗೆ ತಿಳಿದು ಬಂದದ್ದರಿಂದ ಮಕೆದೋನ್ಯ ಮಾರ್ಗವಾಗಿ ಹಿಂತಿರುಗಿ ಹೋಗಲು ನಿರ್ಣಯಿಸಿದನು.