Acts 21:30 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜೆರುಸಲೇಮಿನ ಜನರೆಲ್ಲರು ಬಹು ಕೋಪಗೊಂಡರು. ಅವರೆಲ್ಲರು ಓಡಿಹೋಗಿ ಪೌಲನನ್ನು ಹಿಡಿದು ದೇವಾಲಯದೊಳಗಿಂದ ಎಳೆದುಕೊಂಡು ಬಂದರು. ಆ ಕೂಡಲೇ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಪಟ್ಟಣದಲ್ಲೆಲ್ಲಾ ಕೋಲಾಹಲವೆದ್ದಿತು, ಜನರು ಎಲ್ಲಾ ಕಡೆಯಿಂದಲೂ ಓಡಿಬಂದು ಸೇರಿಕೊಂಡರು. ಪೌಲನನ್ನು ಹಿಡಿದು, ದೇವಾಲಯದ ಹೊರಗಡೆಗೆ ಎಳೆದುಕೊಂಡು ಬಂದ ಕೂಡಲೇ ಬಾಗಿಲುಗಳನ್ನು ಮುಚ್ಚಿದರು.
Kannada BSI Bible 2016
ಆಗ ಪಟ್ಟಣವೆಲ್ಲಾ ಕದಲಿಹೋಯಿತು. ಜನರು ಒಟ್ಟಾಗಿ ಓಡಿಬಂದು ಪೌಲನನ್ನು ಹಿಡಿದು ದೇವಾಲಯದ ಹೊರಗೆ ಎಳೆದುಕೊಂಡು ಬಂದ ಕೂಡಲೆ ಬಾಗಿಲುಗಳು ಮುಚ್ಚಲ್ಪಟ್ಟವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಪಟ್ಟಣವೆಲ್ಲಾ ಕಲಕಿಹೋಯಿತು, ಜನರು ಎಲ್ಲಾ ಕಡೆಯಿಂದ ಓಡಿಬಂದು ಕೂಡಿದರು. ಮತ್ತು ಪೌಲನನ್ನು ಹಿಡಿದು ದೇವಾಲಯದ ಹೊರಗೆ ಎಳೆದುಕೊಂಡು ಬಂದರು. ಕೂಡಲೇ ಬಾಗಿಲುಗಳನ್ನು ಮುಚ್ಚಿದರು.
Kannada Bible (KNCL) BSI 2016
ಪಟ್ಟಣದಲ್ಲೆಲ್ಲಾ ಕೋಲಾಹಲವೆದ್ದಿತು. ಜನರು ನಾಲ್ಕು ದಿಕ್ಕುಗಳಿಂದಲೂ ಓಡಿಬಂದರು. ಪೌಲನನ್ನು ದೇವಾಲಯದಿಂದ ಹೊರಗೆ ಎಳೆದುಹಾಕಿ ಮಹಾದೇವಾಲಯದ ದ್ವಾರಗಳನ್ನು ಮುಚ್ಚಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಡೀ ಪಟ್ಟಣದಲ್ಲೇ ಕೋಲಾಹಲವೆದ್ದಿತು. ಜನರು ಎಲ್ಲಾ ದಿಕ್ಕುಗಳಿಂದ ಓಡೋಡುತ್ತಾ ಬಂದು. ಪೌಲನನ್ನು ಹಿಡಿದುಕೊಂಡು ದೇವಾಲಯದೊಳಗಿಂದ ಹೊರಗೆಳೆದುಕೊಂಡು ಹೋದರು. ಕೂಡಲೇ ದ್ವಾರಗಳನ್ನು ಮುಚ್ಚಿಬಿಟ್ಟರು.