Acts 21:34 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಲ್ಲಿದ್ದ ಜನರಲ್ಲಿ ಕೆಲವರು ಒಂದು ವಿಷಯದ ಬಗ್ಗೆ ಬೊಬ್ಬೆಹಾಕುತ್ತಿದ್ದರೆ, ಉಳಿದವರು ಇತರ ವಿಷಯಗಳ ಬಗ್ಗೆ ಬೊಬ್ಬೆಹಾಕುತ್ತಿದ್ದರು. ಈ ಗಲಿಬಿಲಿಯಿಂದಾಗಿಯೂ ಕೂಗಾಟದಿಂದಾಗಿಯೂ ಏನು ನಡೆಯಿತೆಂಬುದರ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಲಾಗಲಿಲ್ಲ. ಆದ್ದರಿಂದ ಸೇನಾಧಿಪತಿಯು ಪೌಲನನ್ನು ಸೈನ್ಯದ ಕೋಟೆಯೊಳಕ್ಕೆ ತೆಗೆದುಕೊಂಡು ಹೋಗಲು ಸೈನಿಕರಿಗೆ ತಿಳಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವನಾರು? ಏನು ಮಾಡಿದ್ದಾನೆ? ಎಂದು ಕೇಳಲು ಕೆಲವರು ಹೀಗೆ, ಕೆಲವರು ಹಾಗೆ ಕೂಗುತ್ತಿರಲು ಗದ್ದಲದ ನಿಮಿತ್ತ ನಿಜ ಸ್ಥಿತಿಯನ್ನು ತಿಳಿಯಲಾರದೆ ಅವನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು.
Kannada BSI Bible 2016
ಆಗ ಸಮೂಹದಲ್ಲಿ ಕೆಲವರು ಒಂದು ವಿಧವಾಗಿ ಬೇರೆ ಕೆಲವರು ಇನ್ನೊಂದು ವಿಧವಾಗಿ ಕೂಗಿದಾಗ ಆ ಗದ್ದಲದ ನಿಜಸ್ಥಿತಿಯನ್ನು ಅವನು ತಿಳಿಯಲಾರದೆ ಅವನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಬೇಕೆಂದು ಅಪ್ಪಣೆಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವನಾರು? ಏನು ಮಾಡಿದ್ದಾನೆ ಎಂದು ಕೇಳಲು ಕೆಲವರು ಹೀಗೆ ಕೆಲವರು ಹಾಗೆ ಕೂಗುತ್ತಿರಲು ಗದ್ದಲದ ನಿವಿುತ್ತ ನಿಜ ಸ್ಥಿತಿಯನ್ನು ತಿಳಿಯಲಾರದೆ ಅವನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು.
Kannada Bible (KNCL) BSI 2016
ಜನಜಂಗುಳಿಯಲ್ಲಿ ಹಲವರು ಹಲವಿಧವಾಗಿ ಕೂಗಾಡತೊಡಗಿದರು. ಗದ್ದಲ ಹೆಚ್ಚಾಗಿದ್ದುದರಿಂದ ಸೈನ್ಯಾಧಿಪತಿಗೆ ನಿಜಸ್ಥಿತಿಯನ್ನು ತಿಳಿಯಲಾಗಲಿಲ್ಲ. ಆದುದರಿಂದ ಪೌಲನನ್ನು ಕೋಟೆಯೊಳಕ್ಕೆ ಕೊಂಡೊಯ್ಯುವಂತೆ ಆಜ್ಞಾಪಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಜನಸಮೂಹದಲ್ಲಿದ್ದ ಇತರರು ವಿವಿಧ ರೀತಿಯಿಂದ ಕೂಗುತ್ತಿರಲು ಗಲಭೆಯ ನಿಮಿತ್ತ ಸಹಸ್ರಾಧಿಪತಿಗೆ ಸತ್ಯಾಂಶ ತಿಳಿಯಲಾಗಲಿಲ್ಲ. ಆದ್ದರಿಂದ ಪೌಲನನ್ನು ಸೈನಿಕ ಪಾಳ್ಯದೊಳಗೆ ತೆಗೆದುಕೊಂಡು ಹೋಗಲು ಆಜ್ಞಾಪಿಸಿದನು.