Acts 21:39 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪೌಲನು, “ಇಲ್ಲ, ನಾನು ತಾರ್ಸದ ಯೆಹೂದ್ಯನು. ತಾರ್ಸವು ಸಿಲಿಸಿಯ ದೇಶದಲ್ಲಿದೆ. ನಾನು ಆ ಪ್ರಮುಖ ನಗರದ ಪ್ರಜೆ. ದಯವಿಟ್ಟು ಜನರೊಂದಿಗೆ ಮಾತಾಡಲು ನನಗೆ ಅಪ್ಪಣೆಯಾಗಲಿ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಪೌಲನು; ನಾನು ಯೆಹೂದ್ಯನು, ತಾರ್ಸದವನು, ಕಿಲಿಕ್ಯಸೀಮೆಯ ಪ್ರಖ್ಯಾತವಾದ ಪಟ್ಟಣದವನು. ಈ ಜನರಿಗೆ ಕೆಲವು ಮಾತುಗಳನ್ನು ಹೇಳುವುದಕ್ಕೆ ನನಗೆ ಅಪ್ಪಣೆಯಾಗಬೇಕೆಂದು ಕೇಳಿಕೊಳ್ಳುತ್ತೇನೆ ಅಂದನು.
Kannada BSI Bible 2016
ಆದರೆ ಪೌಲನು--ನಾನು ಪ್ರಖ್ಯಾತವಾದ ಕಿಲಿಕ್ಯದ ತಾರ್ಸ ಪಟ್ಟಣದಲ್ಲಿ ನಿವಾಸಿಯಾಗಿರುವ ಯೆಹೂದ್ಯನು; ಈ ಜನರಿಗೆ ಮಾತನಾಡುವಂತೆ ನನಗೆ ಅಪ್ಪಣೆ ಕೊಡು ಎಂದು ನಾನು ನಿನ್ನನ್ನು ಕೇಳಿಕೊಳ್ಳುತ್ತೇನೆ ಅಂದನು.ಅವನು ಅಪ್ಪಣೆ ಕೊಟ್ಟಾಗ ಪೌಲನು ಮೆಟ್ಟಲುಗಳ ಮೇಲೆ ನಿಂತು ಜನರಿಗೆ ಕೈಸನ್ನೆ ಮಾಡಿದನು. ದೊಡ್ಡ ನಿಶ್ಶಬ್ದತೆ ಉಂಟಾದಾಗ ಇಬ್ರಿಯ ಭಾಷೆಯಲ್ಲಿ ಅವರೊಂದಿಗೆ--
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಪೌಲನು - ನಾನು ಯೆಹೂದ್ಯನು, ತಾರ್ಸದವನು, ಕಿಲಿಕ್ಯಸೀಮೆಯ ಪ್ರಖ್ಯಾತವಾದ ಪಟ್ಟಣದವನು. ಈ ಜನರಿಗೆ ಕೆಲವು ಮಾತುಗಳನ್ನು ಹೇಳುವದಕ್ಕೆ ನನಗೆ ಅಪ್ಪಣೆಯಾಗಬೇಕೆಂದು ಕೇಳಿಕೊಳ್ಳುತ್ತೇನೆ ಅಂದನು.
Kannada Bible (KNCL) BSI 2016
ಪೌಲನು ಪ್ರತ್ಯುತ್ತರವಾಗಿ, “ನಾನು ಯೆಹೂದ್ಯನು, ತಾರ್ಸದವನು, ಸಿಲಿಸಿಯ ಪ್ರಾಂತ್ಯದ ಪ್ರಖ್ಯಾತ ಪಟ್ಟಣದವನು. ಈ ಜನರೊಡನೆ ಮಾತನಾಡಲು ದಯವಿಟ್ಟು ಅವಕಾಶಕೊಡಿ,” ಎಂದು ಭಿನ್ನವಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ಪೌಲನು, “ನಾನೊಬ್ಬ ಯೆಹೂದ್ಯನು, ಕಿಲಿಕ್ಯದ ತಾರ್ಸದವನು, ಪ್ರಸಿದ್ಧ ಪಟ್ಟಣದ ನಾಗರಿಕನು. ದಯವಿಟ್ಟು ಜನರೊಂದಿಗೆ ಮಾತನಾಡಲು ನನಗೆ ಅವಕಾಶ ಕೊಡಬೇಕು,” ಎಂದು ಸಹಸ್ರಾಧಿಪತಿಯನ್ನು ಬೇಡಿಕೊಂಡನು.
Recommended Reading