Acts 22:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ದಮಸ್ಕದಲ್ಲಿ ಅನನೀಯ ಎಂಬುವನು ನನ್ನ ಬಳಿಗೆ ಬಂದನು. ಅನನೀಯನು ಧಾರ್ಮಿಕ ವ್ಯಕ್ತಿಯಾಗಿದ್ದನು. ಅವನು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದನು. ಅಲ್ಲಿ ವಾಸವಾಗಿದ್ದ ಯೆಹೂದ್ಯರೆಲ್ಲರು ಅವನನ್ನು ಗೌರವಿಸುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಅಲ್ಲಿ ಧರ್ಮಶಾಸ್ತ್ರಕ್ಕೆ ಸರಿಯಾಗಿ ನಡೆಯುವ ದೈವಭಕ್ತನೂ, ಆ ಸ್ಥಳದ ಯೆಹೂದ್ಯರೆಲ್ಲರಿಂದ
Kannada BSI Bible 2016
ಅಲ್ಲಿ ವಾಸಿಸುತ್ತಿದ್ದ ಅನನೀಯ ಎಂಬ ಒಬ್ಬ ಮನುಷ್ಯನು ಎಲ್ಲಾ ಯೆಹೂದ್ಯರಿಂದ ಒಳ್ಳೆಯವನೆಂದು ಸಾಕ್ಷಿಪಡೆದು ನ್ಯಾಯಪ್ರಮಾಣದ ಪ್ರಕಾರ ಭಕ್ತಿಯುಳ್ಳವನಾಗಿದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಲ್ಲಿ ಧರ್ಮಶಾಸ್ತ್ರಕ್ಕೆ ಸರಿಯಾಗಿ ನಡೆಯುವ ಸದ್ಭಕ್ತನೂ ಆ ಸ್ಥಳದ ಯೆಹೂದ್ಯರೆಲ್ಲರಿಂದ ಒಳ್ಳೆಯವನೆಂದು ಹೆಸರು ಹೊಂದಿದವನೂ
Kannada Bible (KNCL) BSI 2016
“ದಮಸ್ಕಸಿನಲ್ಲಿ ಅನನೀಯ ಎಂಬ ಒಬ್ಬ ವ್ಯಕ್ತಿ ಇದ್ದನು. ಅವನು ಧರ್ಮಶಾಸ್ತ್ರಕ್ಕೆ ಪ್ರಾಮಾಣಿಕನಾಗಿ ಬಾಳಿದವನು. ಆ ಊರಿನ ಸಮಸ್ತ ಯೆಹೂದ್ಯರಿಂದ ಸನ್ಮಾನಿತನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಅನನೀಯ ಎಂಬ ಹೆಸರಿನವನೊಬ್ಬನು ನನ್ನ ಬಳಿ ಬಂದನು. ಅವನು ಮೋಶೆಯ ನಿಯಮಕ್ಕನುಗುಣವಾಗಿ ಭಕ್ತಿವಂತನೂ ಆ ಸ್ಥಳದ ಯೆಹೂದ್ಯರೆಲ್ಲರಿಂದ ಸಾಕ್ಷಿಹೊಂದಿದವನೂ ಆಗಿದ್ದನು.