Acts 22:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪೌಲನು ಯೆಹೂದ್ಯರ ಭಾಷೆಯಲ್ಲಿ ಮಾತಾಡುತ್ತಿರುವುದನ್ನು ಕೇಳಿ ಯೆಹೂದ್ಯರು ಮತ್ತಷ್ಟು ನಿಶಬ್ಧರಾದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ತಮ್ಮ ಸಂಗಡ ಇಬ್ರಿಯ ಭಾಷೆಯಲ್ಲಿ ಮಾತನಾಡುವುದನ್ನು ಕೇಳಿ ಅವರು ಮತ್ತಷ್ಟು ನಿಶ್ಯಬ್ದವಾದರು. ಆಗ ಅವನು ಹೇಳಿದ್ದೇನಂದರೆ;
Kannada BSI Bible 2016
(ಅವನು ತಮ್ಮೊಂದಿಗೆ ಇಬ್ರಿಯ ಭಾಷೆಯಲ್ಲಿ ಮಾತನಾಡಿದ್ದನ್ನು ಅವರು ಕೇಳಿ ಮತ್ತೂ ನಿಶ್ಶಬ್ದ ವಾದರು). ಆಗ ಅವನು--
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ತಮ್ಮ ಸಂಗಡ ಇಬ್ರಿಯ ಭಾಷೆಯಲ್ಲಿ ಮಾತಾಡುವದನ್ನು ಕೇಳಿ ಅವರು ಮತ್ತೂ ನಿಶ್ಶಬ್ದವಾದರು. ಆಗ ಅವನು ಹೇಳಿದ್ದೇನಂದರೆ -
Kannada Bible (KNCL) BSI 2016
ಪೌಲನು ಹೀಗೆ ತಮ್ಮನ್ನು ಸಂಬೋಧಿಸಿ ಹಿಬ್ರು ಭಾಷೆಯಲ್ಲಿ ಮಾತನಾಡುವುದನ್ನು ಕೇಳಿದ್ದೇ ಅಲ್ಲಿದ್ದ ಜನರು ಇನ್ನೂ ನಿಶ್ಯಬ್ಧರಾದರು. ಅವನು ಮುಂದುವರಿಯುತ್ತಾ ಇಂತೆಂದನು:
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ತಮ್ಮೊಂದಿಗೆ ಹೀಬ್ರೂ ಭಾಷೆಯಲ್ಲಿ ಮಾತನಾಡುವುದನ್ನು ಕೇಳಿದಾಗ ಅವರು ಮತ್ತಷ್ಟು ನಿಶ್ಶಬ್ದರಾದರು. ಆಗ ಪೌಲನು: