Acts 22:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಪೌಲನು ಹೀಗೆಂದನು: “ನಾನು ಯೆಹೂದ್ಯನು. ನಾನು ಹುಟ್ಟಿದ್ದು ಸಿಲಿಸಿಯ ದೇಶದ ತಾರ್ಸದಲ್ಲಿ. ಆದರೆ ನಾನು ಬೆಳೆದದ್ದು ಈ ಪಟ್ಟಣದಲ್ಲಿ. ನಾನು ಗಮಲಿಯೇಲನ ವಿದ್ಯಾರ್ಥಿಯಾಗಿದ್ದೆನು. ನಮ್ಮ ಪಿತೃಗಳ ಧರ್ಮಶಾಸ್ತ್ರದ ಬಗ್ಗೆ ಪ್ರತಿಯೊಂದನ್ನೂ ಅವನು ನನಗೆ ಬಹು ಸೂಕ್ಷ್ಮವಾಗಿ ಬೋಧಿಸಿದ್ದಾನೆ. ಇಂದು ಇಲ್ಲಿರುವ ನಿಮ್ಮೆಲ್ಲರಂತೆಯೇ ನಾನೂ ದೇವರ ಸೇವೆಯ ಬಗ್ಗೆ ಬಹಳ ಅಭಿಮಾನ ಉಳ್ಳವನಾಗಿದ್ದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನಾನು ಯೆಹೂದ್ಯನು, ಕಿಲಿಕ್ಯದ ತಾರ್ಸದಲ್ಲಿ ಹುಟ್ಟಿದವನು, ಆದರೆ ಈ ಪಟ್ಟಣದಲ್ಲೇ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ, ನಮ್ಮ ಪೂರ್ವಿಕರ ಧರ್ಮಶಾಸ್ತ್ರದಲ್ಲಿ ಪೂರ್ಣ ಶಿಕ್ಷಣವನ್ನು ಪಡೆದವನು; ನೀವೆಲ್ಲರೂ ಈಹೊತ್ತು ದೇವರ ವಿಷಯದಲ್ಲಿ ಅಭಿಮಾನಿಗಳಾಗಿರುವಂತೆಯೇ, ನಾನೂ ಅಭಿಮಾನಿಯಾಗಿದ್ದೆನು.
Kannada BSI Bible 2016
ನಿಜವಾಗಿಯೂ ನಾನು ಕಿಲಿಕ್ಯದ ತಾರ್ಸ ಪಟ್ಟಣದಲ್ಲಿ ಹುಟ್ಟಿದ ಒಬ್ಬ ಯೆಹೂದ್ಯನು; ಆದರೂ ಈ ಪಟ್ಟಣದಲ್ಲಿ ಗಮಲಿ ಯೇಲನ ಪಾದದ ಬಳಿಯಲ್ಲಿ ಬೆಳೆದವನಾಗಿದ್ದು ಪಿತೃಗಳ ನ್ಯಾಯಪ್ರಮಾಣದ ಸಂಪೂರ್ಣಕ್ರಮಕ್ಕನು ಸಾರವಾಗಿ ಶಿಕ್ಷಣ ಹೊಂದಿ ಈ ದಿನ ನೀವೆಲ್ಲರೂ ಹೇಗೋ ಹಾಗೇ ದೇವರ ಕಡೆಗೆ ಆಸಕ್ತಿಯುಳ್ಳ ವನಾಗಿದ
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಯೆಹೂದ್ಯನು, ಕಿಲಿಕ್ಯದ ತಾರ್ಸದಲ್ಲಿ ಹುಟ್ಟಿದವನು, ಆದರೆ ಈ ಪಟ್ಟಣದಲ್ಲೇ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ ನಮ್ಮ ಪಿತೃಗಳ ಧರ್ಮಶಾಸ್ತ್ರದಲ್ಲಿ ಪೂರ್ಣ ಶಿಕ್ಷಿತನಾದೆನು; ನೀವೆಲ್ಲರೂ ಈಹೊತ್ತು ದೇವರ ವಿಷಯದಲ್ಲಿ ಅಭಿಮಾನಿಗಳಾಗಿರುವಂತೆಯೇ ನಾನು ಅಭಿಮಾನಿಯಾಗಿದ್ದೆನು.
Kannada Bible (KNCL) BSI 2016
“ನಾನೊಬ್ಬ ಯೆಹೂದ್ಯನು, ಸಿಲಿಸಿಯದ ತಾರ್ಸ ಎಂಬಲ್ಲಿ ಹುಟ್ಟಿದವನು. ಆದರೆ, ಇದೇ ಜೆರುಸಲೇಮಿನಲ್ಲಿ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ ನಮ್ಮ ಪೂರ್ವಜರ ಧರ್ಮಶಾಸ್ತ್ರವನ್ನು ಕಟ್ಟುನಿಟ್ಟಾಗಿ ಕಲಿತವನು. ಇಲ್ಲಿ ಇಂದು ನೆರೆದಿರುವ ನೀವೆಲ್ಲರೂ ದೈವಾಭಿಮಾನಿಗಳಾಗಿರುವಂತೆಯೇ ನಾನು ದೈವಾಭಿಮಾನಿಯಾಗಿದ್ದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನಾನು ಕಿಲಿಕ್ಯದ ತಾರ್ಸದಲ್ಲಿ ಜನಿಸಿದ ಯೆಹೂದ್ಯನು, ಈ ಪಟ್ಟಣದಲ್ಲಿಯೇ ಬೆಳೆದವನು, ಗಮಲಿಯೇಲನ ಪಾದ ಸನ್ನಿಧಿಯಲ್ಲಿ ನಮ್ಮ ಪಿತೃಗಳ ನಿಯಮವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದೆ. ದೇವರ ವಿಷಯದಲ್ಲಿ, ಇಂದು ನೀವೆಲ್ಲರೂ ಇರುವಂತೆಯೇ ನಾನೂ ಆಸಕ್ತಿವುಳ್ಳವನಾಗಿದ್ದೆನು.