Acts 22:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೇಸುವಿನ ಮಾರ್ಗವನ್ನು ಯಾರು ಹಿಂಬಾಲಿಸುತ್ತಾರೋ ಅವರನ್ನು ನಾನು ಹಿಂಸಿಸಿದೆನು. ನನ್ನ ದೆಸೆಯಿಂದ ಅವರಲ್ಲಿ ಕೆಲವರು ಕೊಲ್ಲಲ್ಪಟ್ಟರು. ನಾನು ಪುರುಷರನ್ನು ಮತ್ತು ಸ್ತ್ರೀಯರನ್ನು ಬಂಧಿಸಿ ಸೆರೆಮನೆಗೆ ಹಾಕಿದೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಮಾರ್ಗದವರನ್ನು ಹಿಂಸಿಸುವವನಾಗಿ ಗಂಡಸರಿಗೂ, ಹೆಂಗಸರಿಗೂ ಬೇಡಿಹಾಕಿಸುತ್ತಾ, ಅವರನ್ನು ಸೆರೆಮನೆಗಳಿಗೆ ಹಾಕಿಸುತ್ತಾ ಇದ್ದೆನು, ಕೊಲೆ ಮಾಡಲಿಕ್ಕೂ ಹಿಂಜರಿಯದೆ ಹಿಂಸಿಸುತ್ತಿದ್ದೆನು.
Kannada BSI Bible 2016
ನಾನು ಈ ಮಾರ್ಗವನ್ನು ಹಿಡಿದ ಗಂಡಸರನ್ನೂ ಹೆಂಗಸರನ್ನೂ ಬಂಧಿಸಿ ಸೆರೆಮನೆ ಯೊಳಗೆ ಹಾಕಿಸುತ್ತಾ ಅವರನ್ನು ಕೊಲ್ಲುವ ಮಟ್ಟಿಗೂ ಹಿಂಸಿಸಿದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕ್ರಿಸ್ತ ಮಾರ್ಗದವರನ್ನು ಹಿಂಸಿಸುವವನಾಗಿ ಗಂಡಸರಿಗೂ ಹೆಂಗಸರಿಗೂ ಬೇಡೀಹಾಕಿಸುತ್ತಾ ಅವರನ್ನು ಸೆರೆಮನೆಗಳಿಗೆ ಕೊಡಿಸುತ್ತಾ ಇದ್ದೆನು, ಅವರ ಕೊಲೆಗಾದರೂ ಹಿಂತೆಗೆಯಲಿಲ್ಲ.
Kannada Bible (KNCL) BSI 2016
ಕ್ರಿಸ್ತಮಾರ್ಗವನ್ನು ಅನುಸರಿಸುವವರನ್ನು ಸ್ತ್ರೀ ಪುರುಷರೆನ್ನದೆ, ಬಂಧಿಸಿ ಅವರನ್ನು ಸೆರೆಮನೆಗೆ ತಳ್ಳಿದೆ. ಅವರನ್ನು ಮರಣಪರಿಯಂತರ ಪೀಡಿಸಿ ಹಿಂಸಿಸಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಮಾರ್ಗದವರನ್ನು ಸಾಯುವಷ್ಟು ಹಿಂಸಿಸಿದೆನು. ಸ್ತ್ರೀಪುರುಷರೆನ್ನದೆ ಅವರನ್ನು ಬಂಧಿಸಿ ಅವರನ್ನು ಸೆರೆಮನೆಗೆ ಹಾಕಿಸುತ್ತಿದ್ದೆನು,