Acts 23:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈ ವಾಗ್ವಾದವು ಜಗಳವಾಯಿತು. ಯೆಹೂದ್ಯರು ಪೌಲನನ್ನು ತುಂಡುತುಂಡು ಮಾಡುವರೆಂಬ ಭಯದಿಂದ ಸೇನಾಧಿಪತಿಯು ಸಿಪಾಯಿಗಳಿಗೆ, “ಕೆಳಗೆ ಇಳಿದುಹೋಗಿ ಪೌಲನನ್ನು ಯೆಹೂದ್ಯರ ಬಳಿಯಿಂದ ಕೊಂಡೊಯ್ದು ಸೈನ್ಯದ ಕೋಟೆಯೊಳಗೆ ಇರಿಸಿರಿ” ಎಂದು ಆಜ್ಞಾಪಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜಗಳವು ಅಧಿಕವಾದಾಗ ಅವರು ಪೌಲನನ್ನು ಎಳೆದಾಡಿ ಚೂರುಚೂರು ಮಾಡಾರೆಂದು ಸಹಸ್ರಾಧಿಪತಿಯು ಭಯಪಟ್ಟು ಸಿಪಾಯಿಗಳಿಗೆ; ನೀವು ಹೋಗಿ ಅವರ ಮಧ್ಯದಿಂದ ಅವನನ್ನು ಬಲವಂತವಾಗಿ ಹಿಡಿದು ಕೋಟೆಯೊಳಗೆ ತರಬೇಕೆಂದು ಅಪ್ಪಣೆ ಮಾಡಿದನು.
Kannada BSI Bible 2016
ಅಲ್ಲಿ ದೊಡ್ಡ ಭೇದ ಉಂಟಾದಾಗ ಅವರು ಪೌಲನನ್ನು ಎಳೆದಾಡಿ ತುಂಡುತುಂಡಾಗಿ ಮಾಡಿ ಯಾರು ಎಂದು ಮುಖ್ಯ ನಾಯಕನು ಭಯಪಟ್ಟು ಅವನನ್ನು ಅವರೊಳಗಿಂದ ಬಲವಂತವಾಗಿ ಕೋಟೆಯೊಳಗೆ ತರಬೇಕೆಂದು ಸೈನಿಕರಿಗೆ ಆಜ್ಞಾಪಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಜಗಳವು ಬಹಳವಾದಾಗ ಅವರು ಪೌಲನನ್ನು ಎಳೆದಾಡಿ ಚೂರುಚೂರು ಮಾಡಾರೆಂದು ಸಹಸ್ರಾಧಿಪತಿಯು ಭಯಪಟ್ಟು ಸಿಪಾಯಿಗಳಿಗೆ - ನೀವು ಹೋಗಿ ಅವರ ಮಧ್ಯದಿಂದ ಅವನನ್ನು ಬಲವಂತವಾಗಿ ಹಿಡಿದು ಕೋಟೆಯೊಳಗೆ ತರಬೇಕೆಂದು ಆಜ್ಞೆಕೊಟ್ಟನು.
Kannada Bible (KNCL) BSI 2016
ಈ ವಾಗ್ವಾದ ವಿಕೋಪಕ್ಕೆ ಹೋದುದರಿಂದ ಪೌಲನನ್ನು ಅವರು ಖಂಡತುಂಡಾಗಿಸಬಹುದೆಂದು ಸಹಸ್ರಾಧಿಪತಿ ಹೆದರಿದನು. ಅವನು ಸೈನಿಕರನ್ನು ಕಳುಹಿಸಿ ಪೌಲನನ್ನು ಸಭೆಯ ಮಧ್ಯದಿಂದ ಎತ್ತಿಕೊಂಡು ಕೋಟೆಗೆ ತರುವಂತೆ ಆಜ್ಞಾಪಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಜನಸಮೂಹವು ಪೌಲನನ್ನು ಎಳೆದು ತುಂಡುತುಂಡಾಗಿ ಮಾಡುವರೇನೋ ಎಂದು ಸಹಸ್ರಾಧಿಪತಿಗೆ ಬಹಳ ಭಯವಾಯಿತು. ಸೈನಿಕರ ಗುಂಪುಗಳು ಕೆಳಗಿಳಿದು ಹೋಗಿ ಬಲಪ್ರಯೋಗದಿಂದ ಪೌಲನನ್ನು ಎತ್ತಿಕೊಂಡು ಸೈನಿಕ ಪಾಳ್ಯದೊಳಗೆ ಬರಬೇಕೆಂದು ಅವನು ಸೈನಿಕರಿಗೆ ಆಜ್ಞಾಪಿಸಿದನು.