Acts 24:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಏಷ್ಯಾದ ಕೆಲವು ಮಂದಿ ಯೆಹೂದ್ಯರು ಅಲ್ಲಿದ್ದರು. ಅವರು ಈಗ ನಿನ್ನೆದುರಿನಲ್ಲಿ ಇರಬೇಕಿತ್ತು. ನಾನು ನಿಜವಾಗಿ ಏನಾದರೂ ತಪ್ಪು ಮಾಡಿದ್ದರೆ ಏಷ್ಯಾದ ಆ ಯೆಹೂದ್ಯರೇ ನನ್ನ ಮೇಲೆ ದೋಷಾರೋಪಣೆ ಮಾಡಬೇಕಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನನ್ನ ವಿರುದ್ಧ ಅವರಿಗೆ ಏನಾದರೂ ಇದ್ದರೆ, ತಾವೇ ನಿನ್ನ ಮುಂದೆ ತಪ್ಪುಹೊರಿಸುವುದಕ್ಕೆ ಇಲ್ಲಿಗೆ ಬರಬೇಕಾಗಿತ್ತು.
Kannada BSI Bible 2016
ಆದರೆ ನನಗೆ ವಿರೋಧ ವಾಗಿ ಅವರಿಗೆ ಏನಾದರೂ ಇದ್ದಿದ್ದರೆ ಅವರು ನಿನ್ನ ಮುಂದೆ ಆಕ್ಷೇಪಿಸುವದಕ್ಕೆ ಇಲ್ಲಿ ಇರಬೇಕಾಗಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನನ್ನು ಕಂಡವರು ಆಸ್ಯಸೀಮೆಯಿಂದ ಬಂದ ಕೆಲವು ಯೆಹೂದ್ಯರೇ; ನನ್ನ ಮೇಲೆ ಅವರಿಗೆ ಏನಾದರೂ ಇದ್ದರೆ ತಾವೇ ನಿನ್ನ ಮುಂದೆ ತಪ್ಪುಹೊರಿಸುವದಕ್ಕೆ ಇಲ್ಲಿ ಬರಬೇಕಾಗಿತ್ತು.
Kannada Bible (KNCL) BSI 2016
ಆದರೆ, ಏಷ್ಯಾದಿಂದ ಬಂದಿದ್ದ ಯೆಹೂದ್ಯರು ಕೆಲವರು ಅಲ್ಲಿದ್ದರು. ನನ್ನ ಮೇಲೆ ಯಾವುದಾದರೂ ಆಪಾದನೆಯನ್ನು ಹೊರಿಸಬೇಕೆಂದಿದ್ದರೆ, ಅವರೇ ಇಲ್ಲಿ ತಮ್ಮ ಮುಂದೆ ಹಾಜರಿರಬೇಕಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಏಷ್ಯಾ ಪ್ರಾಂತದ ಕೆಲವು ಜನ ಯೆಹೂದ್ಯರು ಅಲ್ಲಿಗೆ ಬಂದಿದ್ದರು. ಅವರಿಗೆ ನನ್ನ ಮೇಲೆ ಏನಾದರೂ ವಿರೋಧವಿದ್ದರೆ, ಅವರು ನಿಮ್ಮ ಸನ್ನಿಧಿಯಲ್ಲಿ ಈಗ ಬಂದು ನನ್ನ ಮೇಲೆ ಅಪರಾಧ ಹೊರಿಸಲಿ.