Acts 24:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ಜೆರುಸಲೇಮಿನಲ್ಲಿ ಯೆಹೂದ್ಯ ನ್ಯಾಯಸಭೆಯ ಮುಂದೆ ನಿಂತಿದ್ದಾಗ, ನನ್ನಲ್ಲಿ ಅವರಿಗೆ ಯಾವ ಅಪರಾಧಗಳು ಕಂಡುಬಂದವೆಂದು ಇಲ್ಲಿರುವ ಈ ಯೆಹೂದ್ಯರನ್ನೇ ಕೇಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಲ್ಲವಾದ್ದರಿಂದ ನಾನು ಹಿರೀಸಭೆಯ ಎದುರಿನಲ್ಲಿ ನಿಂತಿದ್ದಾಗ, ನನ್ನಲ್ಲಿ ತಪ್ಪುಗಳೇನಾದರೂ ಕಂಡಿದ್ದರೆ ಇವರೇ ಹೇಳಲಿ.
Kannada BSI Bible 2016
ಇಲ್ಲವಾದರೆ ಆಲೋಚನಾಸಭೆಯ ಮುಂದೆ ನಾನು ನಿಂತಿದ್ದಾಗ ನನ್ನಲ್ಲಿ ಏನಾದರೂ ಕೆಟ್ಟದ್ದನ್ನು ಅವರು ಕಂಡಿದ್ದರೆ ಅದನ್ನು ಈಗಲೇ ತಿಳಿಯಪಡಿಸಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಲ್ಲವಾದ್ದರಿಂದ ನಾನು ಹಿರೀಸಭೆಯ ಎದುರಿನಲ್ಲಿ ನಿಂತಿದ್ದಾಗ ನನ್ನಲ್ಲಿ ಅಕ್ರಮವನ್ನೇನಾದರೂ ಕಂಡಿದ್ದರೆ ಇವರೇ ಹೇಳಲಿ.
Kannada Bible (KNCL) BSI 2016
ಅಥವಾ, ನಾನು ನ್ಯಾಯಸಭೆಯ ಮುಂದೆ ನಿಂತಿದ್ದಾಗ ನನ್ನಲ್ಲಿ ಯಾವ ಅಪರಾಧಗಳು ಕಂಡುಬಂದವೆಂದು, ಈ ಜನರೇ ಹೇಳಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಲ್ಲವೆ ಇಲ್ಲಿಗೆ ಈಗ ಬಂದವರು ನಾನು ನ್ಯಾಯಸಭೆಯ ಮುಂದೆ ನಿಂತಾಗ ನನ್ನಲ್ಲಿ ಯಾವ ಅಪರಾಧವನ್ನು ಕಂಡರು ಎಂಬುದನ್ನು ಹೇಳಲಿ.