Acts 24:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸ್ವತಃ ನೀನೇ ಇವನಿಗೆ ಕೆಲವು ಪ್ರಶ್ನೆಗಳನ್ನು ಕೇಳು. ಆಗ ಈ ಸಂಗತಿಗಳೆಲ್ಲಾ ಸತ್ಯವಾಗಿವೆಯೋ ಇಲ್ಲವೋ ಎಂದು ನಿರ್ಣಯಿಸಲು ನಿನಗೆ ಸಾಧ್ಯವಾಗುವುದು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವನನ್ನು ನೀನೇ ವಿಚಾರಿಸಿದರೆ, ನಾವು ಇವನ ಮೇಲೆ ಹೊರಿಸುವ ಈ ತಪ್ಪುಗಳೆಲ್ಲಾ ನಿಜವೋ, ಸುಳ್ಳೋ ಎಂದು ಇವನಿಂದಲೇ ತಿಳಿದುಕೊಳ್ಳಬಹುದು” ಎಂದು ಹೇಳಿದನು.
Kannada BSI Bible 2016
ನಾವು ಯಾವ ವಿಷಯಗಳಲ್ಲಿ ಅವನ ಮೇಲೆ ತಪ್ಪು ಹೊರಿಸುತ್ತೇವೋ ಅವೆಲ್ಲವುಗಳ ವಿಷಯವಾಗಿ ನೀನೇ ಸ್ವತಃ ಅವನನ್ನು ವಿಚಾರಿಸಿ ತಿಳುಕೊಳ್ಳುವಂತೆ ಅವನ ಮೇಲೆ ತಪ್ಪು ಹೊರಿಸು ವವರು ನಿನ್ನ ಬಳಿಗೆ ಬರಬೇಕೆಂದು ಅಪ್ಪಣೆ ಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವನನ್ನು ನೀನೇ ವಿಚಾರಿಸಿದರೆ ನಾವು ಇವನ ಮೇಲೆ ಹೊರಿಸುವ ಈ ತಪ್ಪುಗಳೆಲ್ಲಾ ನಿಜವೋ ಸುಳ್ಳೋ ಇವನಿಂದಲೇ ತಿಳಿದುಕೊಳ್ಳಬಹುದು ಎಂದು ಹೇಳಿದನು.
Kannada Bible (KNCL) BSI 2016
ಹಾಗೂ ಇವನ ಮೇಲೆ ತಪ್ಪುಹೊರಿಸುವವರು ತಮ್ಮ ಮುಂದೆ ಬರಬೇಕೆಂದು ಆಜ್ಞೆಯಿತ್ತನು; ತಾವೇ ಕೇಳಿನೋಡಿ; ನಾವು ಇವನ ವಿರುದ್ಧ ತಂದಿರುವ ದೂರುಗಳೆಲ್ಲಾ ಸತ್ಯವಾದುವು ಎಂದು ಇವನಿಂದಲೇ ತಮಗೆ ವ್ಯಕ್ತ ಆಗುವುದು,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವೇ ಪೌಲನನ್ನು ವಿಚಾರಣೆ ಮಾಡುವುದರ ಮೂಲಕ ನಾವು ಇವನಿಗೆ ವಿರೋಧವಾಗಿ ತಂದಿರುವ ದೂರುಗಳೆಲ್ಲವೂ ಸತ್ಯವೆಂದು ನಿಮಗೇ ಗೊತ್ತಾಗುವುದು.”