Acts 25:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಫೆಸ್ತನು ತನ್ನ ಸಲಹೆಗಾರರೊಂದಿಗೆ ಇದರ ಬಗ್ಗೆ ಮಾತಾಡಿದನು. ಬಳಿಕ ಅವನು, “ನನ್ನ ವಿಷಯವನ್ನು ಸೀಸರನೇ ಪರಿಶೀಲಿಸಲಿ ಎಂದು ನೀನು ಕೇಳಿಕೊಂಡದ್ದರಿಂದ ನಿನ್ನನ್ನು ಸೀಸರನ ಬಳಿಗೇ ಕಳುಹಿಸಿಕೊಡುತ್ತೇನೆ” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ, ಫೆಸ್ತನು ತನ್ನ ಸಭೆಯವರ ಸಂಗಡ ಸಮಾಲೋಚನೆಮಾಡಿದ ಮೇಲೆ ಪೌಲನಿಗೆ; “ನೀನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ ಎಂದೆಯಲ್ಲಾ, ಆದುದರಿಂದ ಕೈಸರನ ಬಳಿಗೇ ಹೋಗಬೇಕು” ಎಂದು ಹೇಳಿದನು.
Kannada BSI Bible 2016
ಆಗ ಫೆಸ್ತನು ಆಲೋಚನಾ ಸಭೆಯವ ರೊಂದಿಗೆ ಮಾತನಾಡಿ--ಕೈಸರನ ಮುಂದೆ ಹೇಳಿ ಕೊಳ್ಳುತ್ತೇನೆ ಎಂದು ನೀನು ಹೇಳಿದಿಯಲ್ಲಾ, ನೀನು ಕೈಸರನ ಬಳಿಗೇ ಹೋಗಬೇಕು ಎಂದು ಉತ್ತರ ಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಫೆಸ್ತನು ತನ್ನ ಸಭೆಯವರ ಸಂಗಡ ಆಲೋಚನೆಮಾಡಿದ ಮೇಲೆ ಪೌಲನಿಗೆ - ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ ಅಂದಿಯಲ್ಲಾ, ಚಕ್ರವರ್ತಿಯ ಬಳಿಗೆ ಹೋಗಬೇಕು ಎಂದು ಹೇಳಿದನು.
Kannada Bible (KNCL) BSI 2016
ಆಗ ಫೆಸ್ತನು ತನ್ನ ಸಲಹೆಗಾರರೊಡನೆ ಸಮಾಲೋಚಿಸಿ, “ನೀನು ಅಪೀಲು ಮಾಡಿರುವುದು ಚಕ್ರವರ್ತಿಗೇ ಅಲ್ಲವೆ? ಚಕ್ರವರ್ತಿಯ ಬಳಿಗೇ ಹೋಗು,” ಎಂದು ಉತ್ತರಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಫೆಸ್ತನು ತನ್ನ ನ್ಯಾಯಸಭೆಯೊಂದಿಗೆ ಸಮಾಲೋಚನೆ ಮಾಡಿ, “ನೀನು ಕೈಸರನಿಗೆ ಮನವಿ ಮಾಡಿಕೊಂಡಿರುವೆ, ಕೈಸರನ ಬಳಿಗೇ ಹೋಗು!” ಎಂದು ಉತ್ತರಿಸಿದನು.