Acts 25:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ಜೆರುಸಲೇಮಿಗೆ ಹೋಗಿದ್ದಾಗ ಮಹಾಯಾಜಕರು ಮತ್ತು ಯೆಹೂದ್ಯ ಹಿರಿಯ ನಾಯಕರು ಅವನಿಗೆ ವಿರೋಧವಾಗಿ ದೋಷಾರೋಪಣೆ ಮಾಡಿದರು. ನಾನು ಅವನಿಗೆ ಮರಣದಂಡನೆ ವಿಧಿಸಬೇಕೆಂಬುದು ಈ ಯೆಹೂದ್ಯರ ಅಪೇಕ್ಷೆಯಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಯೆರೂಸಲೇಮಿನಲ್ಲಿದ್ದಾಗ, ಯೆಹೂದ್ಯರ ಮುಖ್ಯಯಾಜಕರೂ, ಹಿರಿಯರೂ ಅವನ ವಿಷಯವಾಗಿ ನನಗೆ ದೂರುಹೇಳಿ ಅವನಿಗೆ ವಿರುದ್ಧವಾಗಿ ತೀರ್ಪು ಆಗಬೇಕೆಂದು ಬೇಡಿಕೊಂಡರು.
Kannada BSI Bible 2016
ನಾನು ಯೆರೂಸಲೇಮಿನಲ್ಲಿದ್ದಾಗ ಪ್ರಧಾನಯಾಜಕರೂ ಯೆಹೂದ್ಯರ ಹಿರಿಯರೂ ಅವನ ವಿಷಯವಾಗಿ ನನಗೆ ತಿಳಿಸಿ ಅವನಿಗೆ ವಿರೋಧವಾಗಿ ತೀರ್ಪುಮಾಡ ಬೇಕೆಂದು ನನ್ನನ್ನು ಬೇಡಿಕೊಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಯೆರೂಸಲೇವಿುನಲ್ಲಿದ್ದಾಗ ಯೆಹೂದ್ಯರ ಮಹಾಯಾಜಕರೂ ಸಭೇಹಿರಿಯರೂ ಅವನ ವಿಷಯವಾಗಿ ನನಗೆ ಫಿರ್ಯಾದಿ ಹೇಳಿ ಅವನಿಗೆ ವಿರುದ್ಧವಾಗಿ ತೀರ್ಪು ಆಗಬೇಕೆಂದು ಬೇಡಿಕೊಂಡರು.
Kannada Bible (KNCL) BSI 2016
ನಾನು ಜೆರುಸಲೇಮಿಗೆ ಹೋಗಿದ್ದಾಗ ಯೆಹೂದ್ಯರ ಮುಖ್ಯಯಾಜಕರೂ ಪ್ರಮುಖರೂ ಅವನ ವಿರುದ್ಧ ಆಪಾದನೆಗಳನ್ನು ತಂದರು. ಅವನಿಗೆ ದಂಡನೆ ವಿಧಿಸುವಂತೆ ಕೇಳಿಕೊಂಡರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಯೆರೂಸಲೇಮಿಗೆ ಹೋದಾಗ ಮುಖ್ಯಯಾಜಕರೂ ಹಾಗೂ ಯೆಹೂದ್ಯರ ಹಿರಿಯರೂ ಅವನ ಮೇಲೆ ಆಪಾದನೆಗಳನ್ನು ತಂದು ಅವನಿಗೆ ವಿರೋಧವಾಗಿ ದಂಡನೆ ವಿಧಿಸಬೇಕೆಂದು ಕೇಳಿಕೊಂಡರು.