Acts 25:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರು ಹೇಳಿದ ಸಂಗತಿಗಳು ಅವರ ಸ್ವಂತ ಧರ್ಮಕ್ಕೆ ಸಂಬಂಧಪಟ್ಟಿದ್ದವು ಮತ್ತು ಯೇಸು ಎಂಬ ವ್ಯಕ್ತಿಯನ್ನು ಕುರಿತದ್ದಾಗಿದ್ದವು. ಸತ್ತುಹೋದ ಯೇಸು ಈಗ ಜೀವಂತವಾಗಿದ್ದಾನೆಂದು ಪೌಲನು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರ ಮತದ ವಿಷಯದಲ್ಲಿಯೂ, ಜೀವಿಸಿದ್ದಾನೆ ಎಂದು, ಪೌಲನು ಹೇಳುವ ಸತ್ತುಹೋದಂಥ ಯೇಸುವೆಂಬ ಒಬ್ಬನ ವಿಷಯದಲ್ಲಿಯೂ, ಅವನ ಮೇಲೆ ಕೆಲವು ವಿವಾದದ ಮಾತುಗಳನ್ನು ತಂದರು.
Kannada BSI Bible 2016
ಆದರೆ ಸತ್ತುಹೋದ ಒಬ್ಬ ಯೇಸು ಬದುಕಿದ್ದಾನೆ ಎಂದು ಪೌಲನು ಸ್ಥಾಪಿಸಿರುವ ವಿಷಯವಾಗಿಯೂ ತಮ್ಮ ಮೂಢಭಕ್ತಿಯ ವಿಷಯವಾಗಿಯೂ ಕೆಲವು ಪ್ರಶ್ನೆಗಳು ಅವನಿಗೆ ವಿರೋಧವಾಗಿ ಅವರಿಗೆ ಇದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರ ಮತದ ವಿಷಯದಲ್ಲಿಯೂ ಸತ್ತುಹೋದಂಥ ಯೇಸುವೆಂಬ ಒಬ್ಬನ ವಿಷಯದಲ್ಲಿಯೂ ಅವನ ಮೇಲೆ ಕೆಲವು ವಿವಾದದ ಮಾತುಗಳನ್ನು ತಂದರು. ಆ ಯೇಸು ಜೀವಿತನಾಗಿದ್ದಾನೆಂದು ಪೌಲನು ಹೇಳಿದನು.
Kannada Bible (KNCL) BSI 2016
ಅವನೊಡನೆ ಅವರಿಗಿದ್ದ ವಾದವಿವಾದ ಅವರ ಧರ್ಮಾಚರಣೆಗಳಿಗೆ ಸಂಬಂಧಪಟ್ಟಿತ್ತು. ಯೇಸು ಎಂಬ ಒಬ್ಬ ವ್ಯಕ್ತಿಯನ್ನು ಕುರಿತೂ ವಿವಾದ ಇತ್ತು. ಯೇಸು ಸತ್ತಿದ್ದರೂ ಜೀವಂತನಾಗಿದ್ದಾನೆಂದು ಪೌಲನು ಸಾಧಿಸುತ್ತಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅವರಿಗೆ ತಮ್ಮ ಸಂಪ್ರದಾಯದ ಬಗ್ಗೆಯೂ ಸತ್ತು ಹೋಗಿದ್ದ ಯೇಸು ಎಂಬ ಮನುಷ್ಯನು ಜೀವಿಸುತ್ತಿದ್ದಾನೆಂದೂ ಪೌಲ ಹೇಳುವಂಥದ್ದರ ಬಗ್ಗೆ ವಾದವಿವಾದವಿತ್ತು.