Acts 25:24 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಫೆಸ್ತನು ಹೀಗೆಂದನು: “ರಾಜ ಅಗ್ರಿಪ್ಪನೇ, ನಮ್ಮೊಂದಿಗೆ ಇಲ್ಲಿ ನೆರೆದಿರುವ ಎಲ್ಲಾ ಜನರೇ, ನೀವು ನೋಡುತ್ತಿರುವ ಈ ಮನುಷ್ಯನ (ಪೌಲನ) ಮೇಲೆ ಇಲ್ಲಿರುವ ಮತ್ತು ಜೆರುಸಲೇಮಿನಲ್ಲಿರುವ ಎಲ್ಲಾ ಯೆಹೂದ್ಯರು ನನಗೆ ದೂರುಗಳನ್ನು ಹೇಳಿ, ಇವನಿಗೆ ಮರಣದಂಡನೆ ಆಗಬೇಕೆಂದು ಆರ್ಭಟಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಫೆಸ್ತನು; “ಅಗ್ರಿಪ್ಪರಾಜನೇ, ನಮ್ಮ ಸಂಗಡ ಕೂಡಿಬಂದಿರುವ ಎಲ್ಲಾ ಜನರೇ, ಈ ಮನುಷ್ಯನನ್ನು ನೋಡುತ್ತೀರಲ್ಲಾ, ಇವನ ವಿಷಯದಲ್ಲಿ ಯೆಹೂದ್ಯರೆಲ್ಲರೂ, ಇವನು ಇನ್ನು ಮೇಲೆ ಬದುಕಬಾರದೆಂದು ಕೂಗುತ್ತಾ ಯೆರೂಸಲೇಮಿನಲ್ಲಿಯೂ, ಇಲ್ಲಿಯೂ ನನ್ನನ್ನು ಬೇಡಿಕೊಂಡರು.
Kannada BSI Bible 2016
ಆಗ ಫೆಸ್ತನು--ಅರಸನಾದ ಅಗ್ರಿಪ್ಪನೇ, ಇಲ್ಲಿ ನಮ್ಮೊಂದಿಗೆ ಸೇರಿ ಬಂದಿರುವ ಎಲ್ಲಾ ಜನರೇ, ಇವನು ಇನ್ನು ಮೇಲೆ ಜೀವಿಸಬಾರದೆಂದು ಯೆರೂಸಲೇಮಿನಲ್ಲಿಯೂ ಇಲ್ಲಿಯೂ ಯಾವ ಮನುಷ್ಯನ ವಿಷಯವಾಗಿ ಯೆಹೂದ್ಯರ ಜನಸಮೂಹವೆಲ್ಲಾ ನನ್ನನ್ನು ಬೇಡಿ ಕೊಂಡಿತೋ ಇವನನ್ನು ನೀವು ನೋಡು
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಫೆಸ್ತನು - ಅಗ್ರಿಪ್ಪರಾಜನೇ, ನಮ್ಮ ಸಂಗಡ ಕೂಡಿಬಂದಿರುವ ಎಲ್ಲಾ ಜನರೇ, ಈ ಮನುಷ್ಯನನ್ನು ನೋಡುತ್ತೀರಲ್ಲಾ, ಇವನ ವಿಷಯದಲ್ಲಿ ಯೆಹೂದ್ಯರೆಲ್ಲರೂ - ಇವನು ಇನ್ನು ಮೇಲೆ ಬದುಕಬಾರದೆಂದು ಕೂಗುತ್ತಾ ಯೆರೂಸಲೇವಿುನಲ್ಲಿಯೂ ಇಲ್ಲಿಯೂ ನನ್ನನ್ನು ಬೇಡಿಕೊಂಡರು.
Kannada Bible (KNCL) BSI 2016
ಆಗ ಫೆಸ್ತನು, “ಅಗ್ರಿಪ್ಪರಾಜರೇ, ಇಲ್ಲಿ ನೆರೆದಿರುವ ಮಹಾಜನರೇ, ನೀವು ನೋಡುತ್ತಿರುವ ಈ ವ್ಯಕ್ತಿಯ ವಿರುದ್ಧ ಇಲ್ಲಿಯೂ ಜೆರುಸಲೇಮಿನಲ್ಲಿಯೂ ಯೆಹೂದ್ಯರೆಲ್ಲರೂ ನನ್ನಲ್ಲಿ ಮನವಿಮಾಡಿಕೊಂಡಿದ್ದಾರೆ. ಇವನನ್ನು ಜೀವಸಹಿತ ಬಿಡಬಾರದೆಂದು ಕೂಗಾಡುತ್ತಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಫೆಸ್ತನು, “ಅಗ್ರಿಪ್ಪ ರಾಜನೇ, ನಮ್ಮ ಸಂಗಡ ಇಲ್ಲಿ ಸೇರಿ ಬಂದಿರುವವರೇ, ನೀವು ಕಾಣುತ್ತಿರುವ ಈ ಮನುಷ್ಯನು ಜೀವದಿಂದ ಉಳಿಯಬಾರದೆಂದು ಯೆರೂಸಲೇಮಿನಲ್ಲಿಯೂ ಇಲ್ಲಿಯೂ ಯೆಹೂದ್ಯರೆಲ್ಲರೂ ನನ್ನನ್ನು ಬೇಡಿಕೊಂಡಿದ್ದಾರೆ.