Acts 25:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿಮ್ಮ ನಾಯಕರಲ್ಲಿ ಕೆಲವರು ನನ್ನೊಂದಿಗೆ ಬರಲಿ. ಅವನು ನಿಜವಾಗಿಯೂ ಅಪರಾಧ ಮಾಡಿದ್ದರೆ ಅವನ ಮೇಲೆ ಸೆಜರೇಯದಲ್ಲೇ ಅವರು ದೋಷಾರೋಪಣೆ ಮಾಡಲಿ” ಎಂದು ಉತ್ತರಕೊಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದಕಾರಣ ನಿಮ್ಮಲ್ಲಿ ಪ್ರಮುಖರು, ನನ್ನೊಂದಿಗೆ ಬಂದು ಆ ಮನುಷ್ಯನಲ್ಲಿ ಅಪವಾದ ಏನಾದರೂ ಇದ್ದರೆ ಅವನ ಮೇಲೆ ತಪ್ಪುಹೊರಿಸಲಿ ಎಂದು ಹೇಳಿದನು.
Kannada BSI Bible 2016
ಆದಕಾರಣ ನಿಮ್ಮಲ್ಲಿ ಸಾಮರ್ಥ್ಯವುಳ್ಳವರು ನನ್ನೊಂ ದಿಗೆ ಬಂದು ಅವನಲ್ಲಿ ದುಷ್ಟತನವೇನಾದರೂ ಇದ್ದರೆ ಅವನ ಮೇಲೆ ತಪ್ಪು ಹೊರಿಸಲಿ ಎಂದು ಅವನು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದಕಾರಣ ನಿಮ್ಮಲ್ಲಿ ಪ್ರಮುಖರು ನನ್ನೊಂದಿಗೆ ಬಂದು ಆ ಮನುಷ್ಯನಲ್ಲಿ ಅನುಚಿತವಾದದ್ದೇನಾದರೂ ಇದ್ದರೆ ಅವನ ಮೇಲೆ ತಪ್ಪುಹೊರಿಸಲಿ ಎಂದು ಹೇಳಿದನು.
Kannada Bible (KNCL) BSI 2016
ಅವನಲ್ಲಿ ಏನಾದರೂ ತಪ್ಪಿದ್ದರೆ ನಿಮ್ಮ ಪ್ರಮುಖರು ನನ್ನ ಜೊತೆಯಲ್ಲೇ ಅಲ್ಲಿಗೆ ಬಂದು ಆಪಾದಿಸಲಿ,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮಲ್ಲಿಯ ಕೆಲವು ನಾಯಕರು ನನ್ನೊಂದಿಗೆ ಅಲ್ಲಿಗೆ ಬರಲಿ. ಅವನೇನಾದರೂ ತಪ್ಪು ಮಾಡಿದ್ದರೆ ಅವನ ಮೇಲಿನ ದೂರುಗಳನ್ನು ಆಪಾದಿಸಲಿ,” ಎಂದನು.